Top

TV5ನಲ್ಲಿ '99' ಬ್ಯಾಚ್ EXCLUSIVE ಕಥೆ ಬಿಚ್ಚಿಟ್ಟ ಗೋಲ್ಡನ್ ಸ್ಟಾರ್..!!

TV5ನಲ್ಲಿ 99 ಬ್ಯಾಚ್ EXCLUSIVE ಕಥೆ ಬಿಚ್ಚಿಟ್ಟ ಗೋಲ್ಡನ್ ಸ್ಟಾರ್..!!
X

ಕಳೆದ ಡಿಸೆಂಬರ್ ತಿಂಗಳಾಂತ್ಯಕ್ಕೆ ತೆರೆಕಂಡು, ಸ್ಯಾಂಡಲ್​ವುಡ್​ ಅಂಗಳದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿದಂತಹ ಸಿನಿಮಾ. ಅದಾದ ಬಳಿಕ, ಗೋಲ್ಡನ್ ಸ್ಟಾರ್ ಗಣೇಶ್ ಸಿನಿಪ್ರಿಯರನ್ನು ಮತ್ತು ಫ್ಯಾನ್ಸ್​ನ ಕೊಂಚ ಕಾಯಿಸಿದ್ದೇನೋ ನಿಜ. ಇದೀಗ ಆರೆಂಜ್ ಮೂಲಕ ಫುಲ್ ಜೂಮ್​ನಲ್ಲಿ ಬಿಗ್ ಸ್ಕ್ರೀನ್​ಗೆ ಲಗ್ಗೆ ಇಡ್ತಿದ್ದಾರೆ.

ಈ ವಾರ ಗಣಿ-ಪ್ರಶಾಂತ್ ರಾಜ್ ಕಾಂಬೋ ಆರೆಂಜ್ ಬರ್ತಿರೋ ರೇಂಜ್​ಗೆ ಬಾಕ್ಸಾಫೀಸ್ ಬ್ಯಾಂಗ್ ಆಗೋ ಸೂಚನೆ ಸಿಕ್ಕಿದೆ. ಆದರೆ ಅದಕ್ಕೋ ಮೊದ್ಲೇ ಗಣಿ ಮತ್ತೊಂದು ಗೋಲ್ಡನ್ ನ್ಯೂಸ್ ಕೊಟ್ಟಿದ್ದಾರೆ. ಗಿಮಿಕ್, ಗೀತಾ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರೋ ಗಣಿ, 99 ಬ್ಯಾಚ್​ನ 99 ಸೀಕ್ರೆಟ್ಸ್ ಬಿಚ್ಚಿಡೋಕೆ ಬರ್ತಿದ್ದಾರೆ.

ತಮಿಳು ಬ್ಲಾಕ್ ಬಸ್ಟರ್ 96 ರಿಮೇಕ್​ನಲ್ಲಿ ಗೋಲ್ಡನ್ ಸ್ಟಾರ್..!!

99 ಬ್ಯಾಚ್​ನ ಕಥೆ ಹೇಳೋಕೆ ಒಂದಾಗ್ತಿದೆ ಬಿಗ್ಗೆಸ್ಟ್ ಕಾಂಬಿನೇಷನ್

ಇತ್ತೀಚೆಗೆ ಸೌತ್ ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ ಚಿತ್ರ. ವಿಜಯ್ ಸೇತುಪತಿ- ತ್ರಿಶಾ ಜೋಡಿಯ ತಮಿಳಿನ ಈ ಡಿಫರೆಂಟ್ ಲವ್ ಜರ್ನಿ, ಅಕ್ಷರಶಃ ನೋಡುಗರನ್ನ ಮಂತ್ರಮುಗ್ಧರನ್ನಾಗಿಸಿತ್ತು. ಸಿ ಪ್ರೇಮ್ ಕುಮಾರ್, ಎಸ್​ಸ್​ಎಸ್​ಎಲ್​ಸಿ 96 ಬ್ಯಾಚ್​ ಹುಡ್ಗರ ರೀ-ಯೂನಿಯನ್​ ಆಗೋ ಕಥಾನಕವನ್ನು ರೂಪಿಸಿದ ಶೈಲಿಗೆ ಪ್ರೇಕ್ಷಕ ಪ್ರಭು ಬಹುಪರಾಕ್ ಅಂದಿದರು.

ಇದೀಗ ಅದೇ 96 ಮೂವಿ ಕನ್ನಡದಲ್ಲಿ ತಯಾರಾಗಲಿದೆ. ಇಲ್ಲಿ 99 ಬ್ಯಾಚ್​ ಹುಡ್ಗತ ಕಥೆ ತೆರೆದುಕೊಳ್ಳಲಿದ್ದು, ಮುಂಗಾರುಮಳೆ ಖ್ಯಾತಿಯ ಪ್ರೀತಮ್ ಗುಬ್ಬಿ ಈ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರೆ. ಅಂದಹಾಗೆ ಚಿತ್ರಕ್ಕೆ 99 ಅನ್ನೋ ಟೈಟಲ್ ಫಿಕ್ಸ್ ಆಗಿದ್ದು, ಮತ್ತೊಮ್ಮೆ ನೋಡುಗರ ದಿಲ್ ರಂಗೇರಿಸೋಕೆ ಸಜ್ಜಾಗಿದ್ದಾರೆ.

ರಾಮು ಫಿಲಂಸ್ ಬ್ಯಾನರ್​ನಡಿ ಮಳೆ ಹುಡ್ಗನ 99 ಬ್ಯಾಚ್

99 ಬ್ಯಾಚ್ ನೆನಪಿನ ಬುತ್ತಿಗೆ ಅರ್ಜುನ್ ಜನ್ಯ 100ನೇ ಹೆಜ್ಜೆ

ಇಲ್ಲಿಯವರೆಗೂ 38 ಸಿನಿಮಾಗಳನ್ನ ಕನ್ನಡ ಸಿನಿಪ್ರಿಯರಿಗೆ ಕೊಟ್ಟಂತಹ ಗಾಂಧಿನಗರದ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್ ರಾಮು ಫಿಲಂಸ್ ಬ್ಯಾನರ್​ನಡಿ ರಾಮು ಈ ಸಿನಿಮಾನ ಕನ್ನಡಕ್ಕೆ ತರ್ತಿದ್ದಾರೆ. ಈ ಹಿಂದೆ ಗಣೇಶ್​ರ ಹುಡುಗಾಟ, ಚೆಲುವಿನ ಚಿತ್ತಾರ, ಕೃಷ್ಣ ಸಿನಿಮಾಗಳನ್ನ ರಾಮ್ ಫಿಲಂಸ್ ಡಿಸ್ಟ್ರಿಬ್ಯೂಟ್ ಮಾಡಿತ್ತು. ಆದ್ರೀಗ ಇದೇ ಮೊದಲ ಬಾರಿ ಗಣಿ-ರಾಮು ಜೋಡಿ 99 ಸಿನಿಮಾಗಾಗಿ ಒಂದಾಗ್ತಿರೋದು ವಿಶೇಷ.

ಇನ್ನು ಅರ್ಜುನ್ ಜನ್ಯ ಈ ಸಿನಿಮಾಗೆ ಮ್ಯೂಸಿಕ್ ಕಂಫೋಸ್ ಮಾಡ್ತಿದ್ದು, ಏಳು ಮೆಲೋಡಿ ಸಾಂಗ್ಸ್ ಕೊಡಲಿದ್ದಾರೆ. ಅಂದಹಾಗೆ ಇದು ಅರ್ಜುನ್ ಜನ್ಯ ಕರಿಯರ್​ನ ಮಹತ್ತರ ಸಿನಿಮಾ ಕೂಡ ಹೌದು. ಜನ್ಯ 100ನೇ ಚಿತ್ರ 99 ಆಗಲಿದ್ದು, ಅದಕ್ಕಾಗಿ ಜನ್ಯ ಬೇರೆಯದ್ದೇ ರೀತಿಯ ಫ್ರೆಶ್ ಮೆಲೋಡಿ ಆಲ್ಬಮ್ ಸಿದ್ದಗೊಳಿಸ್ತಿರೋದು ಮೆಚ್ಚಬೇಕಾದ ವಿಷ್ಯ.

ಡಿಸೆಂಬರ್ 7ಕ್ಕೆ ಕಿಕ್ ಸ್ಟಾರ್ಟ್​..! ಮಾರ್ಚ್​ಗೆ ಗ್ರ್ಯಾಂಡ್ ರಿಲೀಸ್

ಇದೇ ಡಿಸೆಂಬರ್ 7ಕ್ಕೆ 99 ಚಿತ್ರದ ಸ್ಕ್ರಿಪ್ಟ್ ಪೂಜಾ ನಡೆಯಲಿದ್ದು, ಹೊಸ ವರ್ಷಕ್ಕೆ ಅಂದ್ರೆ ಜನವರಿಯಿಂದ ಚಿತ್ರೀಕರಣ ನಡೆಯಲಿದೆ. ಸಿಂಗಲ್ ಶೆಡ್ಯೂಲ್​ನಲ್ಲಿ ಸಿನಿಮಾ ಮುಗಿಸೋ ಯೋಜನೆಯಲ್ಲಿರೋ ನಿರ್ಮಾಪಕ ರಾಮು, ಮಾರ್ಚ್​ನಲ್ಲೇ ಈ ಚಿತ್ರವನ್ನ ಸಿನಿಪ್ರಿಯರ ಮುಂದೆ ತರೋ ಸನ್ನಾಹದಲ್ಲಿದ್ದಾರೆ. ಸದ್ಯ ನಾಯಕಿಯ ತಲಾಷ್​ನಲ್ಲಿರೋ ರಾಮು- ಪ್ರೀತಮ್ ಗುಬ್ಬಿ ಅಂಡ್ ಟೀಂ, ಸಿನಿಮಾಗಾಗಿ ಸಕಲ ತಯಾರಿ ನಡೆಸಿಕೊಳ್ತಿದೆ.

ಸಂತೋಷ್ ರೈ ಪತಾಜೆ ಕ್ಯಾಮೆರಾದಲ್ಲಿ ಸೆರೆಯಾಗಲಿರೋ 99 ಸಿನಿಮಾ, ಮೆಗಾ ಕಾಂಬಿನೇಷನ್​ನಿಂದಲೇ ಸಖತ್ ಸೌಂಡ್ ಮಾಡ್ತಿದ್ದು, ನಿರೀಕ್ಷೆ ಕೂಡ ಹೆಚ್ಚಿಸಿದೆ. ಇನ್ನು ಗೋಲ್ಡನ್ ಸ್ಟಾರ್ ಗಣಿ ಮಾತ್ರ 96 ಚಿತ್ರಕಥೆಗೆ ಜೀವ ತುಂಬೋ ಅಂತಹ ಕಲಾವಿದ ಅನ್ನೋದು ಕೂಡ ಸಿನಿಪ್ರೇಕ್ಷಕರ ಮತ್ತು ವಿಮರ್ಶಕರ ಮಾತು. ಅದೇನೇ ಇರಲಿ, ಗಣಿ ಕರಿಯರ್​ಗೆ 99 ಬೇರೆಯದ್ದೇ ಲೆವೆಲ್​ನ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES