Top

ಯುವಕರು ಪೀಡಿಸಿದ್ದಕ್ಕೆ ಶಾಲೆ ಬಿಡಿಸಿದ ಪೋಷಕರು: ಬಾಲಕಿ ಆತ್ಮಹತ್ಯೆ

ಯುವಕರು ಪೀಡಿಸಿದ್ದಕ್ಕೆ ಶಾಲೆ ಬಿಡಿಸಿದ ಪೋಷಕರು: ಬಾಲಕಿ ಆತ್ಮಹತ್ಯೆ
X

ಪ್ರೀತಿಸು ಎಂದು ಯುವಕರಿಬ್ಬರು ಬೆನ್ನು ಬಿದ್ದಿದ್ದರಿಂದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ‌ಜಿಲ್ಲೆಯಲ್ಲಿ ನಡೆದಿದೆ.

ಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ವಿವಾಹಿತ ಸೇರಿದಂತೆ ಇಬ್ಬರು ಯುವಕರು ಪೀಡಿಸುತ್ತಿದ್ದರು. ಇದರಿಂದ 14 ವರ್ಷದ ಬಾಲಕಿಯ ಪ್ರಾಜಕ್ತಾ ಬಲಭೀಮ ನರಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರೀತಿ ವಿಷಯ ತಿಳಿಸಿದ್ದಕ್ಕಾಗಿ ಮಗಳನ್ನು ಶಾಲೆ ಬಿಡಿಸಿ ಮನೆಯಲ್ಲೇ ಇರಿಸಿದ್ದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಅಪ್ರಾಪ್ತೆಯನ್ನು ಪ್ರೀತಿಸು ಎಂದು ರತ್ನಾಪುರ ಗ್ರಾಮದ ವಿವಾಹಿತ ಶಂಕರ ಹಿಪ್ಪರಕರ (24) ಹಾಗೂ ಮೋಹನ್ ಎಡವೆ (19) ಹಿಂದೆ ಬಿದ್ದಿದ್ದರು. ಕೆಲ‌ವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ ಇಬ್ಬರು ಯುವಕರು ಇತ್ತೀಚೆಗೆ ಅತಿಯಾಗಿ ಕಿರುಕುಳ ನೀಡಲು ಆರಂಭಿಸಿದ್ದರು. ಇದರಿಂದಾಗಿ ಬಾಲಕಿ ಮನೆಯವರಿಗೆ ವಿಷಯ ತಿಳಿಸಿದ್ದಳು.

ಶಾಲೆ ಬಿಡಿಸಿದ ಪೋಷಕರು ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಶಾಲೆ ಬಿಡಿಸಿ ಮನೆಯಲ್ಲೇ ಕೂಡಿ ಹಾಕಿದ್ದರಿಂದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES