ಸಿಲಿಕಾನ್ ಸಿಟಿ ರಸ್ತೆಯಲ್ಲಿ ಡಿಸಿಎಂ ಪುತ್ರಿಯ ದರ್ಬಾರ್..!

X
TV5 Kannada3 Dec 2018 4:08 PM GMT
ಡಿಸಿಎಂ ಪರಮೇಶ್ವರ್ ಮಗಳು ಶಾನಾ ನಗರದ ರಸ್ತೆಗಳಲ್ಲಿ ಐಷಾರಾಮಿ ಕಾರು ಚಲಾಯಿಸಿದ್ದು, ಮಾತ್ರವಲ್ಲದೇ ಟ್ರಾಫಿಕ್ ರೂಲ್ಸ್ ಕೂಡಾ ಮೀರಿದ್ದಾರೆ. ಇದು ಸಾಲದು ಅಂತಾ ತಮ್ಮ ಸ್ಪೀಡ್ ಡ್ರೈವಿಂಗ್ ಮಾಡಿರುವುದು ಯೂಟ್ಯೂಬ್ನಲ್ಲಿ ಅಪ್ಲೋಡ್ ಕೂಡಾ ಮಾಡಿದ್ದಾರೆ.
ರಸ್ತೆ ಸುರಕ್ಷತೆಯ ಬಗ್ಗೆ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಚಿವರ ಪುತ್ರಿಯೇ ಈಗ ರಸ್ತೆ ನಿಯಮ ಉಲ್ಲಂಘಿಸಿದ್ದಾರೆ . ಪೊಲೀಸರು ಮಾತ್ರ ಕಂಡು ಕಾಣದಂತೆ ಇದ್ದಾರೆ.
ರಾಯಲ್ ಆದ ಕಾರಿನಲ್ಲಿ ಬೇಕಾಬಿಟ್ಟಿ ಡ್ರೈವ್ ಮಾಡುವುದು ಸಿಗ್ನಲ್ ರೂಲ್ಸ್ ಫಾಲೋ ಮಾಡದೇ ಬೇಕಾಬಿಟ್ಟಿ ಡ್ರೈವ್ ಮಾಡ್ತಿರೋ ಇವರು ಬೇರ್ಯಾರೂ ಅಲ್ಲ. ಡಿಸಿಎಂ ಡಾ.ಜಿ.ಪರಮೇಶ್ವರ್ ಪುತ್ರಿ ಶಾನಾ
ಇನ್ನೂ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗ್ತಾ ಇದ್ದಂತೆ ಸೋಷಿಯಲ್ ಮೀಡಿಯಾದಿಂದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ. ಜನಸಾಮಾನ್ಯರು ಟ್ರಾಫಿಕ್ ರೂಲ್ಸ್ ಮೀರಿದರೆ ಸಾಕು ಫೈನ್ ಹಾಕೋ ಪೊಲೀಸರು ಡಿಸಿಎಂ ಮಗಳ ವಿಚಾರದಲ್ಲಿ ಮೌನ ವಹಿಸಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
Next Story