Top

ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸಿದ ಸಿಎಂ

ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸಿದ ಸಿಎಂ
X

ಬಿಸಿಯೂಟ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗಿಹರಿಸಲು ನಾನು ಚಿಂತನೆ ನೆಡೆಸಿದ್ದೇನೆ ನಿಮ್ಮ ಚಿಂತನೆಗೆ ಸ್ಪಂದಿಸಲು ಸರ್ಕಾರ ಸಿದ್ದವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಸಿಯೂಟ ಕಾರ್ಯಕರ್ತೆಯರ ಫ್ರೀಡಮ್ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. AITUC ಸಂಘಟನೆಯ 1000ಕ್ಕು ಬಿಸಿಯೂಟ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ ಮೂಲಕ ಪ್ರತಿಭಟನೆ ನಡೆಸುತ್ತಿದರು. ಹೀಗಾಗಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರವಾಗಿ ಕೃಷ್ಣಾದಲ್ಲಿ ಕುಮಾರಸ್ವಾಮಿ ಕಾರ್ಯಕರ್ತೆಯರ ಮುಖಂಡರ ಜೊತೆ ಸಭೆ ನಡೆಸಿದರು.

ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಭೆ ಮುಕ್ತಾಯವಾದ ನಂತರ ಮಧ್ಯಮಗಳೊಂದಿಗೆ ಮಾತನಾಡಿದ ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖ್ಯಮಂತ್ರಿಗಳ ಜೊತೆಗಿನ ಮಾತುಕತೆ ಸಕಾರಾತ್ಮಕವಾಗಿತ್ತು.ಬೆಳಗಾವಿ ಅಧಿವೇಶನದ ಬಳಿಕ ನಮ್ಮೊಂದಿಗೆ ಸಿಎಂ ಮತ್ತೊಂದು ಸಭೆ ಇಟ್ಕೊಂಡು ಚರ್ಚೆ ನಡೆಸ್ತಾರೆ ಅಂತ ಭರವಸೆ ಕೊಟ್ಟಿದ್ದಾರೆ.

ಸರಕಾರ ತುಂಬಾ ಕಷ್ಟದಲ್ಲಿದೆ ಎಂದು ಸಿಎಂ ಹೇಳಿದರು.ಹೆಣ್ಣುಮಕ್ಕಳು ಪ್ರತಿಭಟನೆ ಮಾಡೋದು ಬೇಡ ಎಂದು ಮನವಿ ಮಾಡಿಕೊಂಡರು. ಮುಂದಿನ ಬಜೆಟ್ ನಲ್ಲಿ ನಿಮ್ಮ ಬೇಡಿಕೆ ಬಗ್ಗೆ ಸ್ಪಂದಿಸುವುದಾಗಿ ಸಿಎಂ ತಿಳಿಸಿದ್ದಾರೆ.ನಾವು ಪ್ರತಿಭಟನಾ ನಿರತರ ಜೊತೆ ಈಗ ಹೋಗಿ ಚರ್ಚೆ ನಡೆಸ್ತೇವೆ,ಪ್ರತಿಭಟನೆ ಕೈಬಿಡೋದಾ ಬೇಡವಾ ಅಂತ ಚರ್ಚೆ ನಡೆಸ್ತೇವೆ. ಪ್ರತಿಭಟನೆ ಸ್ಥಳಕ್ಕೆ ಖುದ್ದು ಸಿಎಂ ಬರಬೇಕು ಅನ್ನೋದು ನಮ್ಮ ಬೇಡಿಕೆಇವತ್ತಿನ ಸಭೆಗಳನ್ನು ಮುಗಿಸಿ ಸಾಧ್ಯವಾದ್ರೆ ಬರ್ತೀನಿ ಅಂತ ಸಿಎಂ ಭರವಸೆ ನೀಡಿದ್ದಾರೆ.ಕಾದು ನೋಡ್ತಿವಿ, ಸಿಎಂ ಪ್ರತಿಭಟನಾ ಸ್ಥಳಕ್ಕೆ ಬಂದು ಹೊದ ಬಳಿಕ ನಮ್ಮ ಪ್ರತಿಭಟನೆ ನಿರ್ಧಾರ ಪ್ರಕಟಿಸುತ್ತೇವೆ ಎಂದರು.

ಸಿಎಂ ಪ್ರತಿಭಟನೆ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಭರವಸೆ ನೀಡಬೇಕು ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರು.ಆದರೆ ಇದೀಗ ಪ್ರತಿಭಟನಕಾರರ ಮನವೋಲಿಸಲು ಪಿ.ಸಿ ಜಾಫರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ರನ್ನು ಸಿ ಎಂ ಕುಮಾರಸ್ವಾಮಿ ಕಳುಹಿಸಿದ್ದರು, ಸಿಎಂ ಹಲವು ಕಾರ್ಯಕ್ರಮಗಳಲ್ಲಿ ಇರುವುದರಿಂದ ನಮ್ಮನ್ನು ಕಳುಹಿಸಿದ್ದಾರೆ, ಕೂಡಲೇ ಈ ಪ್ರತಿಭಟನೆ ಕೈ ಬಿಡಿ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನೀವು ಸರ್ಕಾರದ ಈ ನಿರ್ಧಾರವನ್ನು ನಂಬಿ ,ಹೋರಾಟವನ್ನು ಕೈ ಬಿಡಿ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಎಲ್ಲರನ್ನು ಕರೆದು ಸಿಎಂ ಸಭೆ ನಡೆಸುತ್ತಾರೆ ಎಂದು ಮನವಿ ಮಾಡಿದ ಬಳಿಕ ಪ್ರತಿಭಟನೆಯನ್ನು ಬಿಸಿಯೂಟ ಕಾರ್ಯಕರ್ತರು ವಾಪಸ್ ಪಡೆದರು.

Next Story

RELATED STORIES