Top

7ರಿಂದ 8 ಶಾಸಕರು ಬಿಜೆಪಿಗೆ ಹೋಗಬಹುದು: ಸತೀಶ್ ಜಾರಕಿಹೊಳಿ ಬಾಂಬ್

7ರಿಂದ 8 ಶಾಸಕರು ಬಿಜೆಪಿಗೆ ಹೋಗಬಹುದು: ಸತೀಶ್ ಜಾರಕಿಹೊಳಿ ಬಾಂಬ್
X

ಬಿಜೆಪಿ ಮೊದಲಿನಿಂದಲೂ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಲೇ ಇದೆ. 24 ಶಾಸಕರು ಅಲ್ಲ. 7ರಿಂದ 8 ಶಾಸಕರು ಹೋಗಬಹುದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಶ್ರೀರಾಮುಲು ಆಪ್ತ ಹಾಗೂ ದುಬೈ ಉದ್ಯಮಿ ನಡುವೆ ಆಪರೇಷನ್ ಕಮಲ ಕುರಿತು ನಡೆದ ಮಾತುಕತೆಯ ಆಡಿಯೋ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾತೆವಾರಿ ರೆಸಾರ್ಟ್​ಗೆ ಭೇಟಿ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಬಿಜೆಪಿಗೆ ಹೋದರೆ 7ರಿಂದ 8 ಶಾಸಕರು ಹೋಗಬಹುದು. 25 ಜನ ಹೋಗಲ್ಲ. 7-8 ಶಾಸಕರಿಗೆ ಅಸಮಾಧಾನ ಇರುವುದು ನಿಜ. ಆದರೆ ಅವರು ಯಾರೂ ಪಕ್ಷ ಬಿಟ್ಟು ಹೋಗಲ್ಲ. ಒಂದು ವೇಳೆ ಇಷ್ಟು ಶಾಸಕರು ಹೋದರೂ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬಿಜೆಪಿಯವರು ಕಳೆದ 6 ತಿಂಗಳಿನಿಂದಲೂ ಆಮೀಷವೊಡ್ಡುತ್ತಲೇ ಬರುತ್ತಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡೋದು ಬೇಡ. ನಾನಂತೂ ಎಲ್ಲಿಯೂ ಹೋಗುವುದಿಲ್ಲ ಹೀಗಾಗಿ ಇವುಗಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಅಧಿವೇಶನಕ್ಕೆ ಮುಂಚೆ ಸಚಿವ ಸಂಪುಟ ವಿಸ್ತರಣೆ ಆದರೂ ಆಗಬಹುದು. ನಾನು ಸಚಿವ ಸ್ಥಾನ ಆಕಾಂಕ್ಷಿ ಅಲ್ಲ. ಒಂದೇ ಮನೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ನಾನು ಶಾಸಕನಾಗಿದ್ದುಕೊಂಡೆ ಸಾಕಷ್ಟು ಪವರಫುಲ್ ಆಗಿದ್ದೇನೆ. ಸಚಿವರಿಗಿಂತಲೂ ಹೆಚ್ಚು ಕೆಲಸ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

Next Story

RELATED STORIES