Top

20 ಶಾಸಕರಿಗೆ `ಕೈ' ಹಾಕಿದ ಆಪರೇಷನ್ ಕಮಲ?

20 ಶಾಸಕರಿಗೆ `ಕೈ ಹಾಕಿದ ಆಪರೇಷನ್ ಕಮಲ?
X

ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತವಾಗುತ್ತಿದ್ದಂತೆ ಮತ್ತೆ ಆಪರೇಷನ್ ಕಮಲದ ಸುದ್ದಿ ಹರಡುತ್ತಿದ್ದು, ಸುಮಾರು 20 ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಮತ್ತೆ ಸಂಚಲನ ಸೃಷ್ಟಿಸಿದೆ.

ಸಮ್ಮಿಶ್ರ ಸರ್ಕಾರ ಕೆಡವಿ ತಮ್ಮದೇ ಸರಕಾರ ರಚನೆಗೆ ಬಿಜೆಪಿ ಯತ್ನಿಸುತ್ತಿದ್ದು, ಬಿಜೆಪಿ ಪ್ರಭಾವಿ ಶಾಸಕ ಶ್ರೀರಾಮುಲು ಅವರ ಪಿಎ ಉದ್ಯಮಿ ಅವರ ಜೊತೆ ಆಪರೇಷನ್ ಕಮಲದ ಬಗ್ಗೆ ಮಾತನಾಡಿರುವ ವೀಡಿಯೋ ಈಗ ಬಹಿರಂಗವಾಗಿದೆ. ಇದರಿಂದ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಿದೆ.

ಕಾಂಗ್ರೆಸ್​ನ 20 ಶಾಸಕರಿಗೆ ಲಂಚದ ಅಮಿಷ ಒಡ್ಡಲು ಅಗತ್ಯವಾದ ಹಣ ಪೂರೈಸುವಂತೆ ಶ್ರೀರಾಮುಲು ಪಿಎ ದುಬೈ ಮೂಲದ ಉದ್ಯಮಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಅಧಿವೇಶನದೊಳಗೆ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಸರ್ಕಾರ ಕೆಡವಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಶ್ರೀರಾಮುಲು ಆಪ್ತ ಮಾತನಾಡಿರುವ ವೀಡಿಯೊ ಇದು ಎನ್ನಲಾಗಿದ್ದು, ನಿಜವಾಗಿಯೂ ಆಪ್ತನೇ ಅಥವಾ ಯಾರೋ ಕಿಡಿಗೇಡಿಗಳು ಈ ವೀಡಿಯೊ ಸೃಷ್ಟಿಸಿರಬಹುದೇ ಎಂಬ ಅನುಮಾನಗಳು ಕಾಡುತ್ತಿವೆ.

ಗುಪ್ತಚರ ಇಲಾಖೆಯಿಂದ ಸಿಎಂಗೆ ಆಪರೇಷನ್ ಕಮಲದ ಬಗ್ಗೆ ಮಾಹಿತಿ ರವಾನೆಯಾಗಿದೆ. ಈ ವಿಚಾರವನ್ನ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂರುವ ಸಿಎಂ ಕುಮಾರಸ್ವಾಮಿ, ಶಾಸಕರನ್ನ ಹಿಡಿತದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

Next Story

RELATED STORIES