Top

G20 ಶೃಂಗಸಭೆ: ಸೌದಿ ರಾಜನನ್ನು ಬರಮಾಡಿಕೊಂಡ ಪುಟಿನ್

G20 ಶೃಂಗಸಭೆ: ಸೌದಿ ರಾಜನನ್ನು ಬರಮಾಡಿಕೊಂಡ ಪುಟಿನ್
X

ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣದ ಕುರಿತಂತೆ ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬಗ್ಗೆ ಹಲವರು ಬೇಸರದಲ್ಲಿದ್ದರೂ ಕೂಡ, G20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಸಲ್ಮಾನ್‌ನನ್ನು ಖುಷಿಯಿಂದ ಸ್ವಾಗತಿಸಿದರು.

ಎರಡು ತಿಂಗಳ ಹಿಂದೆ ಸೌದಿ ಪತ್ರಕರ್ತ ಜಮಾಲ್ ಖಶೋಗ್ಗಿಯನ್ನ ಕೆಲ ದುಷ್ಕರ್ಮಿಗಳು ಸೌದಿ ರಾಯಭಾರಿ ಕಚೇರಿಯಲ್ಲಿ ಕೊಲೆ ಮಾಡಿದ್ದರು. ಖಶೋಗ್ಗಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದನೆಂಬ ಕಾರಣಕ್ಕೆ, ಈ ಕೊಲೆಯನ್ನ ಸೌದಿ ರಾಜಕುಮಾರ ಸಲ್ಮಾನ್ ಮಾಡಿಸಿದ್ದಾನೆಂದು ಅಮೆರಿಕ ಸಂಸಂದೀಯ ಗುಪ್ತಚರ ಇಲಾಖೆ ತೀರ್ಮಾನಿಸಿತ್ತು. ಈ ಕಾರಣಕ್ಕಾಗಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೂ ಕೂಡ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟೀನ್, ಹಸ್ತಲಾಘವ ಮಾಡಿ, ಅಪ್ಪುಗೆ ನೀಡುವ ಮೂಲಕ ಸಲ್ಮಾನ್‌ನನ್ನು ಸ್ವಾಗತಿಸಿದರು.

Next Story

RELATED STORIES