ಪ್ರಿಯಾಂಕಾ- ನಿಕ್ ಮೆಹೆಂದಿ ಸಂಭ್ರಮ ಹೇಗಿತ್ತು ಗೊತ್ತಾ..?

X
TV5 Kannada2 Dec 2018 1:28 AM GMT
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಪ್ರಿಯಾಂಕಾ- ನಿಕ್ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸಂಭ್ರಮದ ಕ್ಷಣಗಳನ್ನ ಹಂಚಿಕೊಂಡಿದ್ದಾರೆ.
ಈಗಾಗಲೇ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿರುವ ಪ್ರಿಯಾಂಕಾ ಮತ್ತು ನಿಕ್ ಜೋನ್ಸ್, ಇಂದು ಜೋಧ್ಪುರ ಅರಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ.
ಜೋಧ್ಪುರದ ಉಮೈದ್ ಅರಮನೆಯಲ್ಲಿ ಪಿಗ್ಗಿ-ನಿಕ್ ಮದುವೆ ನಡೆಯುತ್ತಿದ್ದು, ಈ ಜೋಡಿ ಮೆಹಂದಿ ಕಾರ್ಯಕ್ರಮದ ಸುಂದರ ಕ್ಷಣಗಳ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಫೋಟೋದಲ್ಲಿ ಪಿಗ್ಗಿ ಹಳದಿ, ಕೇಸರಿ, ಹಸಿರು ಬಣ್ಣದ ಬಟ್ಟೆಯಲ್ಲಿ ಮಿಂಚಿದರೆ, ನಿಕ್ ಬಿಳಿ ಬಣ್ಣದ ಪ್ರಿಂಟೆಡ್ ಕುರ್ತಾದಲ್ಲಿ ಮಿಂಚಿದ್ದಾರೆ. ನಟಿ ಪರಿಣಿತಿ ಚೋಪ್ರಾ ಸೇರಿ ಹಲವು ಸಂಬಂಧಿಕರು ಪಿಗ್ಗಿ-ನಿಕ್ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
Next Story