ಪೊಲೀಸರ ಸುಪರ್ದಿಯಲ್ಲಿ ಪ್ರೇಮಿಗಳಿಗೆ ಮದುವೆ!

X
TV5 Kannada2 Dec 2018 9:36 AM GMT
ಹೈದರಾಬಾದ್ ನಲ್ಲಿ ಪ್ರೇಮಿಸಿದ್ದ ಜೋಡಿಗೆ ಪೊಲೀಸರೇ ಖುದ್ದು ನಿಂತು ಮದುವೆ ಮಾಡಿಸಿದ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆಯಿತು.
ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿದ್ಯಾನಗರದ ಶ್ರೀರಾಮ ಮಂದಿರದಲ್ಲಿ ಭಾನುವಾರ ಮದುವೆ ಜರುಗಿದ್ದು, ವೆಂಕಟ ಭಾರ್ಗವ ಹಾಗೂ ನಿರಂಜನಾ ಮನ್ನೆ ದಾಂಪತ್ಯಕ್ಕೆ ಕಾಲಿರಿಸಿದರು.
ಹೈದರಾಬಾದ್ನಲ್ಲಿ ಪರಿಚಯವಾಗಿದ್ದ ವೆಂಟಕ ಭಾರ್ಗವ ಮತ್ತು ನಿರಂಜನಾ ಪರಸ್ಪರ ಪ್ರೇಮಿಸಲು ಅರಂಭಿಸಿದ್ದರು. ಇದಕ್ಕೆ ನಿರಂಜನಾ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು.
ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಹೈದರಾಬಾದ್ ಮಹಿಳಾ ಮಂಡಳಿಗೆ ಮನವಿ ಮಾಡಿದ್ದರು. ಮಹಿಳಾ ಮಂಡಳಿ ಈ ವಿಷಯವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದರು.
ತೆಲಂಗಾಣ ರಾಜ್ಯಪಾಲ ನರಸಿಂಹನ್ ಸೂಚನೆ ಮೇರೆಗೆ ರಾಜ್ಯ ಪೊಲೀಸ್ ಮಾಹಾ ನಿರ್ದೇಶಕರು ಮದುವೆಗೆ ವ್ಯವಸ್ಥೆ ಕಲ್ಪಿಸಿಕೊಟ್ಟರು. ಸ್ಥಳೀಯ ಪೊಲೀಸರ ಭದ್ರತೆಯೊಂದಿಗೆ ಯುವ ಜೋಡಿಗೆ ಮದುವೆ ಮಾಡಲಾಯಿತು.
Next Story