Top

ಪೊಲೀಸರಿಗೆ ಚುಟುಚುಟು ಅಂತೈತಿ:ಸೋಮಲಿಂಗ ಸ್ವಾಮೀಜಿ

ಪೊಲೀಸರಿಗೆ ಚುಟುಚುಟು ಅಂತೈತಿ:ಸೋಮಲಿಂಗ ಸ್ವಾಮೀಜಿ
X

ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ‌ ನಿರ್ಮಾಣಕ್ಕಾಗಿ ಜನಾಗ್ರಹ ಸಭೆಯನ್ನು ವಿಜಯಪುರದಲ್ಲಿ ನಡೆಸಲಾಗುತ್ತಿದೆ.

ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ವಿ ಹೆಚ್ ಪಿ‌ ಹಾಗು ಭಜರಂಗದಳ ಸಂಘಟನೆಗಳಿಂದ ಸಭೆ ನಡೆಯುತ್ತಿರುವ ವೇಳೆ ಮಾತನಾಡಿದ ಸೋಮಲಿಂಗ ಸ್ವಾಮೀಜಿಗಳು ಬನಾಯೆಂಗೆ ಮಂದಿರ ಹಾಡಿಗೆ ವಿರೋಧ ವ್ಯಕ್ತ ಪಡೆಸಿದ್ದ ಪೊಲೀಸರಿಗೆ ತಿರುಗೇಟು ನೀಡಿದ್ದಾರೆ. ಬನಾಯೆಂಗೆ ಮಂದಿರ ಹಾಡು ಹಾಕಿದರೇ ಸಾಕು ಪೊಲೀಸರಿಗೆ ಚುಟು, ಚುಟು ಅಂತೈತಿ ಎಂದರು.

ಸಭೆಗೂ ಮುನ್ನ ವಿವಾದಿತ ಹಾಗೂ ಜಿಲ್ಲೆಯಲ್ಲಿ ನಿಷೇಧಿತ ಹಾಡಾದ "ಬನಾಯೆಂಗೆ‌ ಮಂದಿರ್" ಹಾಡ ನ್ನು ಹಾಕಿ ಸಂಯೋಜಕರು ಯಡವಟ್ಟು ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲೆ ಇದ್ದ ಪೊಲೀಸರು ಹಾಡು ಹಾಕದಂತೆ ತಾಕೀತು ಮಾಡಿದ್ದಾರೆ. ಆದರೆ ಪೊಲೀಸರ ಮಾತಿಗೆ‌ ಕ್ಯಾರೆ ಎನ್ನದ ವಿಶ್ವ ಹಿಂದೂ ಪರಿಷತ್ ಕಾರ್ಯಕ ರ್ತರು ಹಾಡು ಮುಂದುವರಿಸಿದರು. ಇದರಿಂದಾಗಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಹಾಡು ಹಾಕಿಯೇ‌ ತೀರುತ್ತೇವೆಂದು ಕಾರ್ಯಕರ್ತರು ಪಟ್ಟು ಹಿಡಿದ ಘಟನೆಯು ನಡೆಯಿತು. ಹೀಗಾಗಿ ಕಾರ್ಯಕರ್ತರು ಪೊಲೀಸರ ಮಧ್ಯ ಮಾತಿನ ಚಕಮಕಿ ಮುಂದುವರೆದಿದೆ. ಸ್ಥಳದಲ್ಲಿ ಆತಂಕದ ವಾತಾವರಣ‌ ನಿರ್ಮಾಣವಾಗಿದ್ದು, ಸ್ಥಳಕ್ಕೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿ ದೆ.

Next Story

RELATED STORIES