Top

ರಾಮ ಮಂದಿರ ನೋಡ್ತೇನೋ ಇಲ್ವವೋ: ಪೇಜಾವರಶ್ರೀ

ರಾಮ ಮಂದಿರ ನೋಡ್ತೇನೋ ಇಲ್ವವೋ: ಪೇಜಾವರಶ್ರೀ
X

ನನಗೀಗ 88 ವರ್ಷ. ನಾನು ಬದುಕಿರುವಾಗಲೇ ರಾಮ ಮಂದಿರ ನಿರ್ಮಾಣ ಆಗುತ್ತೋ ಇಲ್ಲವೋ. ರಾಮ ಮಂದಿರ ನೋಡುತ್ತೇನೊ ಇಲ್ಲವೋ ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ನೋವು ತೋಡಿಕೊಂಡಿದ್ದಾರೆ.

ಉಡುಪಿಯಲ್ಲಿ ಭಾನುವಾರ ನಡೆದ ಜನಾಗ್ರಹ ಸಮಾವೇಶದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ದೇಶದ ಸ್ವಾಭಿಮಾನದ ಪ್ರಶ್ನೆ. ಮುಸ್ಲಿಂ ಬಾಂಧವರು ಕೂಡ ರಾಮ ಮಂದಿರಕ್ಕೆ ಒಪ್ಪಿಗೆ ನೀಡಿದರೆ ‘ದೇಶದಲ್ಲಿ ಸೌಹಾರ್ದತೆ ಮೂಡುತ್ತದೆ ಎಂದರು.

ರಾಮನ ಹೆಸರಿನಿಂದಲೇ ಈಗ ದೇಶದ ಜನತೆಗೆ ಹೊಸ ಸ್ಪೂರ್ತಿ ಬಂದಿದೆ. ರಾಮನ ಪಾದ ಸ್ಪರ್ಷದಿಂದ ಅಹಲ್ಯೆಯ ಜಾಡ್ಯ ಹೋಯಿತು. ನಮ್ಮ ಭಾರತದ ಜನರಿಗೂ ಜಾಡ್ಯ ಬಂದಿತ್ತು. ಜಾಡ್ಯಕ್ಕೊಳಗಾದ ನಮ್ಮ ಜನತೆಗೆ ರಾಮ ಪಾದುಕೆ ಸ್ಪರ್ಷದಿಂದ ನಮ್ಮ ಜನ ಚೈತನ್ಯ ಭರಿತರಾಗಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದರು.

ಜನ ರಾಮ ಮಂದಿರ ನಿರ್ಮಾಣಕ್ಕೆ ಕಾಯ್ತಿದ್ದರೂ ನಮ್ಮ ನ್ಯಾಯಾಧೀಶರಿಗೆ ಈ ವಿಚಾರದ ಆದ್ಯತೆಯೇ ಇಲ್ಲ. ಇದು ಸಮಗ್ರ ಹಿಂದೂ ಜನತೆಗೆ ಮಾಡಿದ ಅಪಮಾನ. ರಾಮನಿಗೆ ಮಾಡಿದ ಅಪಮಾನ. ಇದು ನಮಗೆ ಅತ್ಯಂತ ಬೇಸರ ತಂದಿದೆ. ನ್ಯಾಯಾಲಯದ ವಿಚಾರಗಳಲ್ಲಿ ದೊಡ್ಡ ಪರಿವರ್ತನೆ ಆಗಬೇಕು. ತೀರ್ಪು ಬೇಗ ಹೊರಬೀಳಬೇಕು ಎಂದು ಅವರು ಹೇಳಿದರು.

ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಲ್ಲ. ನಾವೆಲ್ಲಾ ಸ್ವಾಮೀಜಿಗಳು ಪಕ್ಷಾತೀತರು.ನಾವು ಯಾವುದೇ ಪಕ್ಷದ ಪರವಾಗಿಲ್ಲ. ಪರವಾಗಿದ್ದಾರೆ ಎಂದು ಯಾರೂ ಭಾವಿಸಕೂಡದು. ನಾವು ಕೇವಲ ರಾಷ್ಟ್ರದ ಪರವಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

Next Story

RELATED STORIES