Top

ಸಾವಿಗೂ ಮುನ್ನ ಐಸಿಯುನಲ್ಲಿ ಪತ್ರ ಬರೆದ ಗರ್ಭಿಣಿ

ಸಾವಿಗೂ ಮುನ್ನ ಐಸಿಯುನಲ್ಲಿ ಪತ್ರ ಬರೆದ ಗರ್ಭಿಣಿ
X

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಮೃತಪಟ್ಟಿರುವ ಘಟನೆ ಮೈಸೂರಿನ ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಾಡ್ಲ ಗ್ರಾಮದ ನಿವಾಸಿ ಸ್ನೇಹಾ(23) ಮೃತ ದುರ್ದೈವಿ. ಕೆಮ್ಮು ಹೆಚ್ಚಾದರಿಂದ ಅಕ್ಟೋಬರ್‌ 30ರಂದು ಮೈಸೂರಿನ ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ನೇಹ ದಾಖಲಾಗಿದ್ದರು. ವೈದ್ಯರು ಸ್ನೇಹಗೆ ಒಂದೂವರೆ ತಿಂಗಳು ಚಿಕಿತ್ಸೆ ನೀಡಿದ್ದರು ಯಾವುದೇ ಚಿಕಿತ್ಸೆ ಫಲಕಾರಿಯಾಗಿಲ್ಲ,ಇನ್ನು ವೈದ್ಯರು ಭಾನುವಾರ ಆರು ತಿಂಗಳ ಮಗುವನ್ನು ಅಬಾರ್ಷನ್ ಮಾಡಿ ಆಚೆ ತೆಗೆದಿದ್ದರೆ ಮಗು ಕೂಡ ಮೃತಪಟ್ಟಿದೆ.

ಇದೀಗಾ 7 ತಿಂಗಳ ತುಂಬು ಗರ್ಭಿಣಿಯಾಗಿದ್ದ ಸ್ನೇಹಾಗೆ ಕಳೆದ ತಿಂಗಳು ಇದ್ದಕಿದ್ದಂತೆ ಕೆಮ್ಮು ಕಾಣಿಸಿಕೊಂಡಿತಂತೆ. ಇದರಿಂದ ವೈದ್ಯರ ಬಳಿ ತೋರಿಸಿದ ಸ್ನೇಹ, ವೈದ್ಯರ ಸಲಹೆಯಯಂತೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ರು. ಅಕ್ಟೋಬರ್ 30ರಂದು ಮೈಸೂರಿನ ಪ್ರತಿಷ್ಠಿತ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿ ಸತತ 33 ದಿನದ ಚಿಕಿತ್ಸೆ ಪಡೆದಿದ್ದಾಳೆ.

ಆದರೆ 32ದಿನ ಚಿಕಿತ್ಸೆ ಪಡೆದ್ರು ಚಿಕಿತ್ಸೆ ಫಲಕಾರಿಯಾಗದೆ ಸ್ನೇಹ ಇಂದು ಅಸುನೀಗಿದ್ದಾಳೆ. ಇದರಿಂದ‌ ಪೋಷಕರು ರೊಚ್ಚಿಗೆದ್ದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ರು. ಒಂದು ತಿಂಗಳಿಂದ ಸುಮಾರು 17.5 ಲಕ್ಷ ಹಣ ಕಟ್ಟಿಸಿಕೊಂಡು ಚಿಕಿತ್ಸೆ ನೀಡಿದ್ರಂತೆ. ಅಷ್ಟೆ ಅಲ್ಲದೆ ಅವಳು ಚೇತರಿಸಿಕೊಳ್ಳಲಿಲ್ಲ ಅಂದ್ರೆ ಡಿಸ್ಚಾರ್ಜ್ ಮಾಡಿಕೊಡಿ ಬೇರೆ ಆಸ್ಪತ್ರೆಗೆ ದಾಖಲಿಸುತ್ತೇವೆ ಅಂತಾ ಹೇಳಿದ್ವಿ. ಆದ್ರೆ ಇಂದು ಬೆಳಿಗ್ಗೆಯವರೆಗೂ ಚಿಕಿತ್ಸೆ ಮುಂದುವರೆಸಿದ್ದು, ಇಂದು ಬೆಳಿಗ್ಗೆ ಹೊಟ್ಟೆಯಲ್ಲಿದ್ದ ಮಗು ಸತ್ತುಹೋಗಿದೆ‌ ಅಂತಾ ಹೇಳಿ ಭ್ರೂಣವನ್ನ ಕೊಟ್ಟಿದ್ದಾರೆ. ನಂತರ ಸ್ನೇಹ ಕೂಡ ಮೃತಪಟ್ಟಿದ್ದಾಳೆ ಅಂತ ಹೇಳಿದ್ದಾರೆಂದು ಸ್ನೇಹ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಸ್ನೇಹ ಹಾಗೂ ಮಗು ಸಾವಿನಿಂದ ರೊಚ್ಚಿಗೆದ್ದ ಸ್ನೇಹ ಪೋಷಕರು ಹಾಗೂ ಸಂಬಂಧಿಕರು, ಭ್ರೂಣವನ್ನ ಆಸ್ಪತ್ರೆಗೆ ಮುಂಭಾಗ ಇಟ್ಟು ನ್ಯಾಯ ಕೊಡಿಸಿ ಅಂತಾ ಪ್ರತಿಭಟನೆ ನಡೆಸಿದ್ರು. ಇದು ವೈದ್ಯರ ನಿರ್ಲಕ್ಷ್ಯವೆ ಕಾರಣ ನಮಗೆ ನ್ಯಾಯ ಬೇಕು ಅಂತಾ ಪಟ್ಟು ಹಿಡಿದ್ರು. ಇನ್ನೂ ಸಾವಿಗೂ ಮುನ್ನ ಸ್ನೇಹ ನಾನು ಆರೋಗ್ಯವಾಗಿದ್ದೇನೆ ಎಂದು ಪೋಷಕರಿಗೆ ಪತ್ರ ಬರೆದಿದ್ದಾರೆ.

ಸಾವಿನ ಕುರಿತು ಆಸ್ಪತ್ರೆ ವೈದ್ಯರು ಹೇಳೋದೆ ಬೇರೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ. ನಾವೂ ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಿದ್ವಿ, ಆದ್ರೆ ಆಕೆ ನ್ಯೂಮೋನಿಯಾದಿಂದ ಬಳಲುತ್ತಿದ್ದರು. ನೂರರಲ್ಲಿ ಮೂವರಿಗೆ ಈ ರೀತಿ ಖಾಯಿಲೆ ಬರುತ್ತೆ. ಇದರಿಂದ ಶ್ವಾಸಕೋಶದಲ್ಲಿ ರಕ್ತಸ್ರಾವವಾಗುತ್ತೆ. ಇದರಿಂದ ಚಿಕಿತ್ಸೆ ಸ್ಪಂದಿಸದೆ ಆಕೆ ಸಾವನಪ್ಪಿದ್ದಾಳೆ ಅಂತಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ದಿಲೀಪ್ ಸ್ಪಷ್ಟನೆ ಕೊಡ್ತಾರೆ.

ಒಟ್ಟಾರೆ, ಲಕ್ಷ ಲಕ್ಷ ಹಣ ಖರ್ಚು ಮಾಡಿದ್ರು ಅಮ್ಮ ಮಗು ಎರಡು ಜೀವಗಳು ಉಳಿಯಲಿಲ್ಲ ಅಂತಾ ಪೋಷಕರ ನೋವಾದ್ರೆ, ಮತ್ತೊಂದು ಕಡೆ ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಂತರ ಪ್ರಕರಣದ ಸತ್ಯ ಸತ್ಯತೆ ಗೊತ್ತಾಗಲಿದೆ.

Next Story

RELATED STORIES