Top

ಅಂಬರೀಶ್ ಕನಸ್ಸಿನ ಕೂಸಿಗೆ ಅಂಬಿಯದ್ದೇ ಹೆಸರು..?

ಅಂಬರೀಶ್ ಕನಸ್ಸಿನ ಕೂಸಿಗೆ ಅಂಬಿಯದ್ದೇ ಹೆಸರು..?
X

ಹಿರಿಯ ನಟ ಅಂಬರೀಶ್ ನಿಧನರಾಗಿ ಒಂದು ವಾರ ಕಳೆದಿದೆ. ಅಪ್ರತಿಮ ನಟನಿಗೆ ಗೌರವ ಸಲ್ಲಿಸಲು ಮುಂದಾಗಿರುವ ಸರ್ಕಾರ ಅಂಬಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದೆ. ಸ್ಮಾರಕ ನಿರ್ಮಾಣ ಕುರಿತು ರೂಪುರೇಷೆ ಸಿದ್ದ ಪಡಿಸಲು ಅಧಿಕಾರಿಗಳ ಸಭೆ ಕರೆದಿದ್ದಾರೆ.

ಅಂಬರೀಶ್ ಗೆ ಗೌರವ ಸಲ್ಲಿಸಲು ಮುಂದಾಗಿರುವ ಮೈತ್ರಿ ಸರ್ಕಾರ, ಸ್ಮಾರಕ ನಿರ್ಮಾಣ ಮಾಡಲು‌ ಮುಂದಾಗಿದೆ. ಅವರ ಸಮಾಧಿ ಇರೋ ಕಂಠೀರವ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣದ ಕುರಿತು ಚರ್ಚೆ ನಡೆಸಲು ಮುಂದಾಗಿದ್ದಾರೆ.

ಬಜೆಟ್ ನಲ್ಲಿ ಘೋಷಿಸಿದ್ದಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡಲು ನಿರ್ಧರಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಡಿಸೆಂಬರ್ 3 ರಂದು ಸಭೆ ಕರೆದಿರುವ ಹೆಚ್ ಡಿಕೆ, ಫಿಲ್ಮ್ ಸಿಟಿ ನಿರ್ಮಾಣ ಕುರಿತು ಚರ್ಚೆ ನಡೆಸಲಿದ್ದಾರೆ.

ಇನ್ನೂ ಸಭೆಗೆ ರಾಕ್ ಲೈನ್ ವೆಂಕಟೇಶ್, ಮುನಿರತ್ನ ಸೇರಿದಂತೆ ಮತ್ತಿತರರು ಭಾಗಿಯಾಗಲಿದ್ದಾರೆ. ಈಗಾಗಲೇ ಫಿಲ್ಮ್ ಸಿಟಿಗೆ ಅಂಬರೀಶ್ ಹೆಸರಿಡುವಂತೆ ಮಾಜಿ‌ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿರುವ ಹೆಚ್​ಡಿಕೆ ಅಂಬರೀಶ್ ಕುಟುಂಬಸ್ಥರ ಜೊತೆಗೂ ಮಾತುಕತೆ ನಡೆಸಲಿದ್ದಾರೆ.

ಅಂಬರೀಶ್ ಹೆಸರಲ್ಲಿ ಸರ್ಕಾರದ ವತಿಯಿಂದಲೂ ಕೆಲವೊಂದಿಷ್ಟು ಯೋಜನೆ ಕಾರ್ಯಕ್ರಮ ಘೋಷಿಸಲು‌ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಸೋಮವಾರ ನಡೆಯುವ ಸಭೆಯಲ್ಲಿ ವಿಸ್ತೃತ ಚರ್ಚೆ ಆಗುವ ಸಾಧ್ಯತೆ ಇದೆ.

Next Story

RELATED STORIES