Top

ದಾರಿ ತಪ್ಪಿಸು ದೇವರೆ ಸಿನಿಮಾದಿಂದ ಶೃತಿ ಔಟ್..!

ದಾರಿ ತಪ್ಪಿಸು ದೇವರೆ ಸಿನಿಮಾದಿಂದ ಶೃತಿ ಔಟ್..!
X

ದಾರಿ ತಪ್ಪಿಸು ದೇವರೆ ಚಿತ್ರದಲ್ಲಿ ನಟಿಸುವ ಅವಕಾಶವನ್ನ ನಟಿ ಶೃತಿ ಹರಿಹರನ್‌ ಕಳೆದುಕೊಂಡಿದ್ದಾರೆ. ನಾನು ಅವನಲ್ಲ ಅವಳು ಸಿನಿಮಾ ಖ್ಯಾತಿಯ ನಿರ್ದೇಶಕ ಬಿ.ಎಸ್.ಲಿಂಗದೇವರು, ದಾರಿ ತಪ್ಪಿಸು ದೇವರೇ ಸಿನಿಮಾ ಪ್ರಾಜೆಕ್ಟ್ ನಿಲ್ಲಿಸಿದ್ದಾರೆ.

ಚಿತ್ರಕ್ಕೆ ಶೃತಿ ಹರಿಹರನ್ ನಾಯಕಿಯಾಗಿ ಆಯ್ಕೆಯಾಗಿದ್ದರು. ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ಮೀಟೂ ಪ್ರಕರಣದಲ್ಲಿ ಶೃತಿ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂದರ್ಭದಲ್ಲಿ ಶೂಟಿಂಗ್ ಕರೆಯೋದು ತಪ್ಪು ಎಂದು ಬೇರೆ ನಟಿಗೆ ಅವಕಾಶ ನೀಡಲಾಗಿದೆ.

ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕರು, ಮೀಟೂ ಪ್ರಕರಣದಲ್ಲಿ ಶೃತಿ ಸುದ್ದಿಯಾಗಿದ್ದು, ಇದರಿಂದ ಚಿತ್ರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ನಾಯಕಿಯನ್ನು ಬದಲಿಸಲಿಲ್ಲ ಎಂದಿದ್ದಾರೆ. ಅಲ್ಲದೇ ಜನವರಿಯಲ್ಲಿ ಶೃತಿ ಅಮೆರಿಕಕ್ಕೆ ಹೋಗಬೇಕಿತ್ತು. ಈ ಕಾರಣಕ್ಕಾಗಿ ಅವರ ಸ್ಥಾನಕ್ಕೆ ಬೇರೆ ನಾಯಕಿಯನ್ನು ತರಲಾಗಿದೆ. ಬೇರೆ ಯಾವ ಉದ್ದೇಶದಿಂದಲೂ ಶೃತಿಯನ್ನು ಚಿತ್ರದಿಂದ ಕೈಬಿಟ್ಟಿಲ್ಲ ಎಂದು ಬಿ.ಎಸ್.ಲಿಂಗದೇವರು ಟಿವಿ5ಗೆ ಸ್ಪಷ್ಟನೆ ನೀಡಿದ್ದಾರೆ.

Next Story

RELATED STORIES