ತಮಿಳುನಾಡಿನಲ್ಲಿ ಅಪಘಾತ: ಬೆಂಗಳೂರಿನ ನಾಲ್ವರು ಸ್ನೇಹಿತರ ಸಾವು

X
TV5 Kannada2 Dec 2018 6:02 AM GMT
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಬೆಂಗಳೂರಿನ ನಾಲ್ವರು ಮೃತಪಟ್ಟ ಘಟನೆ ತಮಿಳುನಾಡಿನ ದಿಂಡಗಲ್ ಜಿಲ್ಲೆಯ ತಾಡಕೊಂಬು ಬಳಿ ಸಂಭವಿಸಿದೆ.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬೆಂಗಳೂರು ಮೂಲದ ಲೋಕೇಶ್, ಬಾಬು, ಮಂಜುನಾಥ್, ಹರೀಶ್ ಮೃತಪಟ್ಟ ದುರ್ದೈವಿಗಳು.
ಕಾರಿನ ಮಾಲೀಕ ಲೋಕೇಶ್ ಸ್ವತಃ ಕಾರು ಚಲಾಯಿಸುತ್ತಿದ್ದು, ಕಾರು ಚಲಾಯಿಸುತ್ತಿದ್ದ ವೇಳೆ ನಿದ್ದೆಗೆ ಜಾರಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Ka-05-MR-4129 ಸಂಖ್ಯೆಯ ಸ್ವಿಫ್ಟ್ ಕಾರು ಅಪಘಾತಕ್ಕೀಡಾಗಿದ್ದು, ತಡ ರಾತ್ರಿ ಬೆಂಗಳೂರಿನ ರಾಜಾಜಿನಗರದಿಂದ ಸ್ನೇಹಿತರು ಪ್ರವಾಸಕ್ಕೆ ಹೊರಟ್ಟಿದ್ದರು ಎಂದು ಹೇಳಲಾಗಿದೆ.
Next Story