Top

ಕಾಫಿನಾಡಲ್ಲಿ ಮೈ ರೋಮಾಂಚನಗೊಳಿಸಿದ ಕಾರ್‌ ರೇಸ್​​

ಕಾಫಿನಾಡಲ್ಲಿ ಮೈ ರೋಮಾಂಚನಗೊಳಿಸಿದ ಕಾರ್‌ ರೇಸ್​​
X

ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಸ್ಪೋರ್ಟ್ಸ್ ಕಾರ್‌ ರೇಸ್‌ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದರು. 3 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರು ಕಾರನ್ನು ಧೂಳೆಬ್ಬಿಸ್ತಾ ಓಡಿಸ್ತಿದ್ದರು ಇನ್ನೂ ಕಾರುಗಳು ನೋಡಿದವರ ಎದೆ ಮೇಲೆ ಹೋದಂತಿತ್ತು.

ಒಟ್ಟು ಕಾರು ರೇಸ್​ನಲ್ಲಿ 51 ಮಂದಿ ಅಖಾಡಕ್ಕಿಳಿದಿದ್ದು. ದೇಶದ ನಾನಾ ಭಾಗದಿಂದ ಬಂದ ಸ್ಪರ್ಧಿಗಳ ಜೊತೆ ಸ್ಥಳಿಯ ಪ್ರತಿಭೆಗಳು ತೊಡೆ ತಟ್ಟಿದ್ದು ಅಲ್ಲಿಲಿನ ಮತ್ತೊಂದು ವಿಶೇಷವಾಗಿದೆ.

ಪ್ರೇಕ್ಷಕರ ರಂಜನೆಗೆಂದೇ ಆಯೋಜಿಸಿದ್ದ ಸ್ಪೋರ್ಟ್ಸ್ ಕಾರ್‌ ರೇಸ್‌ನಲ್ಲಿ ರಾಷ್ಟ-ಅಂತರಾಷ್ಟ್ರೀಯ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡ್ತಿರೋ ಕಾರುಗಳನ್ನು ನೋಡಿ ಜನ ಮನರಂಜನೆ ಪಡೆದರು.

ಮೂಡಿಗೆರೆಯ ಚಂದ್ರಾಪುರ, ಕಮ್ಮರಗೋಡು, ಚಟ್ನಹಳ್ಳಿ ಕಾಫಿ ತೋಟಗಳಲ್ಲಿ ಇನ್ನು ಎರಡು ದಿನ ಓಡೋ ಕಾರುಗಳು ನೋಡುಗರಿಗೆ ಮತ್ತಷ್ಟು ಮನೋರಂಜನೆ ನೀಡಲಿದೆ.

Next Story

RELATED STORIES