Top

ರಕ್ಷಿತ್ ಶೆಟ್ಟಿ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಕಾಯ್ತಿರೋದ್ಯಾಕೆ..?

ರಕ್ಷಿತ್ ಶೆಟ್ಟಿ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ ಕಾಯ್ತಿರೋದ್ಯಾಕೆ..?
X

ಕಿರಿಕ್​ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ- ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದು, ಆ ಸಿನಿಮಾ ಸೂಪರ್ ಹಿಟ್ ಆಗುವ ವೇಳೆಗೆ ಇಬ್ಬರೂ ಪ್ರೀತಿಲಿ ಬಿದ್ದಿದ್ದು, ಮುಂದೆ ಜೋಡಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡ್ಕೊಂಡಿದ್ದು, ಇತ್ತೀಚೆಗೆ ಬ್ರೇಕಪ್​ ಆಗಿದ್ದು ಎಲ್ಲಾ ಗೊತ್ತೇಯಿದೆ.

ಮಾಜಿ ಬಾಯ್​ಫ್ರೆಂಡ್ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾಗಾಗಿ ಕಾತರದಿಂದ ಕಾಯ್ತಿರೋದಾಗಿ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ನಿರ್ದೇಶಕ ಸಚಿನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.. ಅವರಿಗೆ ಟ್ವೀಟ್ ಮಾಡಿ ಶುಭಾಷಯ ತಿಳಿಸಿದ ರಶ್ಮಿಕಾ ಮಂದಣ್ಣ, ಸಚಿನ್ ನಿರ್ದೇಶನದ ಚಿತ್ರಕ್ಕಾಗಿ ಕಾತರದಿಂದ ಕಾಯ್ತಿರೋದಾಗಿ ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಮಯದಲ್ಲಿ ರಕ್ಷಿತ್ ಕ್ಯಾಂಪ್​ನಲ್ಲಿ ಗುರ್ತಿಸಿಕೊಂಡಿದ್ದಾರೆ. ಸಚಿನ್ ಕೂಡ ಆಗ ರಶ್ಮಿಕಾಗೆ ಸ್ನೇಹಿತರು.. ಹಾಗಾಗಿ ಸಚಿನ್ ಸಿನಿಮಾಗಾಗಿ ಕಾಯ್ತಿದ್ದೀನಿ ಅಂತ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆ ಕಿರಿಕ್ ಪಾರ್ಟಿ ಸಿನಿಮಾ ಬಂದು ಎರಡು ವರ್ಷ ಕಳೆದರು, ರಕ್ಷಿತ್ ಅಭಿನಯದ ಯಾವುದೇ ಹೊಸ ಸಿನಿಮಾ ಬಂದಿಲ್ಲ. ಸಿಕ್ಕಾಪಟ್ಟೆ ಕೇರ್ ತಗೊಂಡು ಅವನೇ ಶ್ರೀಮನ್ನಾರಾಯಣ ಸಿನಿಮಾವನ್ನು ರಕ್ಷಿತ್ ಅಂಡ್ ಟೀಮ್ ನಿರ್ಮಾಣ ಮಾಡ್ತಿದೆ. ಟೈಟಲ್​, ಸ್ಟೋರಿಲೈನ್​ನಿಂದ ಕುತೂಹಲ ಕೆರಳಿಸಿರೋ ಸಿನಿಮಾ ತೆರೆಮೇಲೆ ಯಾವ ರೀತಿ ಮೋಡಿ ಮಾಡುತ್ತೆ ಅಂತ ಕಾದು ನೋಡ್ಬೇಕು.

Next Story

RELATED STORIES