Top

ನಿತಿನ್ ಗಡ್ಕರಿ ಓರ್ವ ಡೈನಾಮಿಕ್‌ ಮಂತ್ರಿ: ರೇವಣ್ಣ

ನಿತಿನ್ ಗಡ್ಕರಿ ಓರ್ವ ಡೈನಾಮಿಕ್‌ ಮಂತ್ರಿ: ರೇವಣ್ಣ
X

ಸರ್ಕಾರ ಇರಲಿ ಇಲ್ಲದಿರಲಿ ಹಾಸನದ ಮಟ್ಟಿಗೆ ಅಭಿವೃದ್ದಿ ಕೆಲಸ ನಿರಂತವಾಗಿ ನಡೆಯುತ್ತಿರುತ್ತವೆ.ಇನ್ನೂ ಸರಕಾರ ಬಂದ ಮೇಲೆ ಹೇಳಬೇಕಾ. ಸರ್ಕಾರ ಬಂದ ಆರು ತಿಂಗಳಲ್ಲಿ 3 ಸಾವಿರ ಕೋಟಿ ಅಭಿವೃದ್ದಿ ಕೆಲಸ ಮಾಡಿದ್ದ ಸಚಿವ ರೇವಣ್ಣ, ಇಂದು ಸಿಎಂ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕರೆಸಿ 1865 ಕೋಟಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕು ಸ್ಥಾಪನೆ ನೇರೇವೆಸಿದರು.

ಇದೇ ಸಮಯದಲ್ಲಿ ಮಾತನಾಡಿದ ಸಚಿವ ರೇವಣ್ಣ, ನಿತಿನ್ ಗಡ್ಕರಿ ಓರ್ವ ಡೈನಾಮಿಕ್‌ ಮಂತ್ರಿ, ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ.ರಾಜ್ಯಕ್ಕೆ 23 ಸಾವಿರ ಕೋಟಿ ವೆಚ್ಚದ ಯೋಜನೆ ಕೊಟ್ಟ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಅವರನ್ನು ಯಾವರೀತಿ ಹೊಗಳಬೇಕೋ ಗೊತ್ತಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮ ಉದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಹಲವು ದಿನಗಳ ಬಳಿಕ ನಾನು ಹಾಸನಕ್ಕೆ ಬಂದಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಚಿವ ರೇವಣ್ಣ ಹಾಸನಕ್ಕೆ ಬರುವಂತೆ ಆಹ್ವಾನಿಸಿದ್ದರು.

ಕರ್ನಾಟಕ ಸಂಪನ್ಮೂಲ ಭರಿತ ರಾಜ್ಯವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾದರೆ ರಾಜ್ಯ ಮತ್ತು ದೇಶ ಅಭಿವೃದ್ಧಿಯಾಗುತ್ತದೇ. ಕರ್ನಾಟಕದಲ್ಲಿ 13 ಸಾವಿರಕ್ಕೂ ಹೆಚ್ಚು ಕಿ,ಮೀ ಉದ್ದದ ರಸ್ತೆ ಅಭಿವೃದ್ಧಿಯಾಗಿದೆ ಎಂದರು.ಅಲ್ಲದೆ ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಇದೆ ವಿವಿಧ ಹೆದ್ದಾರಿಗಳನ್ನು ಮಂಜೂರು ಮಾಡಿ ಎಂದು ದಿವಂಗತ ಅನಂತ್ ಕುಮಾರ್ ಕೇಳುತ್ತಿದ್ದರು ಎಂದು ತಮ್ಮ ಹಳೆಯ ಸ್ನೇಹಿತ ರನ್ನು ನಿತಿನ್ ಗಡ್ಕರಿ ನೆನೆಸಿಕೊಂಡರು.

ಕರ್ನಾಟಕ ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸಿದ ಎಲ್ಲಾ ಯೋಜನೆಗಳಿಗೂ ಕೇಂದ್ರ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಗಡ್ಕರಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ,ತಮಿಳುನಾಡು-ಕರ್ನಾಟಕ ರಾಜ್ಯಗಳ ನಡುವೆ ಕಾವೇರಿ-ಮೇಕೆದಾಟು ವಿಚಾರವಾಗಿ ವ್ಯಾಜ್ಯಗಳಿವೆ. ಆದರೂ ದೇವೇಗೌಡರ ಮನವಿಗೆ ಸ್ಪಂದಿಸಿ ಮೇಕೆದಾಟು ಯೋಜನೆಯ ಡಿಪಿಆರ್ ತಯಾರಿಸಲು ಅನುಮತಿ ನೀಡಿರುವುದಕ್ಕೆ ರಾಜ್ಯದ ಜನತೆ ಪರವಾಗಿ ಕೇಂದ್ರಕ್ಕೆ ಧನ್ಯವಾದ ತಿಳಿಸಿದರು.

ಕೆಲವರು ಈ ಸಮ್ಮಿಶ್ರ ಸರ್ಕಾರ ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರ ಸೀಮಿತ ಎನ್ನುತ್ತಿದ್ದಾರೆ.. ಆದ್ರೆ ಬೆಂಗಳೂರಿನಲ್ಲಿ 17 ಸಾವಿರ ಕೋಟಿ ರೂ ವೆಚ್ಚದಲ್ಲಿ ಪಿಆರ್ ಆರ್ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ.. ವಾಹನ‌ ದಟ್ಟನೆ ಕಡಿಮೆ ಮಾಡಲು 24 ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಯೋಜನೆ ತಯಾರಿಸಲಾಗುತ್ತಿದೆ ಎಂದು ಸಿಎಂ, ರಾಜ್ಯದ ಎಲ್ಲಾ ಜಿಲ್ಲೆಗಳು ನನಗೆ ಒಂದೇ ಎಂದರು.

ಇನ್ನು ಇಂದಿನ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ ಗೈರಾಗಿದ್ದು, ನೇಪಾಳ ದೇಶದ ಪ್ರಧಾನಿಗಳು ಆಹ್ವಾನಿಸಿದ್ದರಿಂದ ಕಠ್ಮಂಡುವಿನಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟ ಸಭೆಯಲ್ಲಿ ದೇವೇಗೌಡರು ಭಾಗವಹಿಸಿದ್ದಾರೆ ಎಂದು ಸಿಎಂ ಗೌಡರ ಗೈರಿಗೆ ಸ್ಪಷ್ಟನೆ ನೀಡಿದರು.

Next Story

RELATED STORIES