Top

ದಚ್ಚು ಫ್ಯಾನ್ಸ್​ಗೆ ಅರಗಿಸಿಕೊಳ್ಳಲಾಗದ ನ್ಯೂಸ್ ಕೊಟ್ಟಿದ್ಯಾರು..?

ದಚ್ಚು ಫ್ಯಾನ್ಸ್​ಗೆ ಅರಗಿಸಿಕೊಳ್ಳಲಾಗದ ನ್ಯೂಸ್ ಕೊಟ್ಟಿದ್ಯಾರು..?
X

ಸಿಲ್ವರ್ ಸ್ಕ್ರೀನ್ ಮೇಲೆ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ದರ್ಬಾರ್ ನೋಡಿ ವರ್ಷ ಕಳೆದಿದೆ. ಇನ್ನೆರಡು ತಿಂಗಳು ಅಂತಹ ಅವಕಾಶ ಕೂಡ ಕಾಣಿಸ್ತಿಲ್ಲ. ಅದಕ್ಕೆ ಕಾರಣ ಕುರುಕ್ಷೇತ್ರ ಮತ್ತು ಯಜಮಾನ ಸಿನಿಮಾಗಳು.

ಪೋಸ್ಟ್ ಪ್ರೊಡಕ್ಷನ್​ ವರ್ಕ್​ ಲೇಟ್ ಆಗ್ತಿರೋದ್ರಿಂದ ಕುರುಕ್ಷೇತ್ರ ಸಿನಿಮಾ ತೆರೆಮೇಲೆ ಬರೋ ದು ತಡವಾಗ್ತಿದೆ. ಸದ್ಯದ ಸುದ್ದಿ ಕೇಳಿದ್ರೆ, ದಚ್ಚು ಅಭಿಮಾನಿಗಳು ಬೇಸರಗೊಳ್ಳೋದು ಗ್ಯಾರಂಟಿ.

ಇನ್ನೈದು ತಿಂಗಳು ಗ್ಯಾರಂಟಿ ಇಲ್ಲ ದುರ್ಯೋಧನನ ದರ್ಬಾರ್..!

ಇಂತಾದೊಂದು ಬ್ರೇಕಿಂಗ್ ಸುದ್ದಿ ಕುರುಕ್ಷೇತ್ರ ಅಖಾಡದಿಂಗ ಹೊರಬಿದ್ದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಕಳೆದ ಮಾರ್ಚ್​ನಲ್ಲೇ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗ್ಬೇಕಿತ್ತು. ಥ್ರಿಡಿ ಮತ್ತು 2ಡಿ ವರ್ಷನ್​ಗಳಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು, ಅಂದುಕೊಂಡ ಮಟ್ಟದಲ್ಲಿ ಸಿನಿಮಾ ಮೂಡಿ ಬರೋವರೆಗೂ ರಿಲೀಸ್ ಮಾಡಲ್ಲ ಅಂತ ನಿರ್ಮಾಪಕರು ಪಟ್ಟು ಹಿಡಿದು ಕೂತಿದ್ದಾರೆ. ಇನ್ನೊಂದು ತಿಂಗಳು ಅಂತ ಹೇಳಿ ಹೇಳಿ ಈಗಾಗಲೇ 6 ತಿಂಗಳು ಕಳೆದುಹೋಗಿದೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್​ವರೆಗೂ ಕುರುಕ್ಷೇತ್ರ ದರ್ಶನ ಸಾಧ್ಯವಿಲ್ಲವಂತೆ.

ಬಹುತಾರಾಗಣದ ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಪೌರಾಣಿಕ ಥ್ರಿಡಿ ಸಿನಿಮಾ ಕುರುಕ್ಷೇತ್ರ. ನಾಗಣ್ಣ, ವಿ. ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸ್ನೇಹ , ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರು, ಪೌರಾಣಿಕ ಪಾತ್ರಗಳಲ್ಲಿ ವಿಜೃಂಭಿಸೋಕೆ ಬರ್ತಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ದರ್ಶನ್​ ದುರ್ಯೋಧನನಾಗಿ ಅಬ್ಬರಿಸೋಕೆ ಬರ್ತಿದ್ದಾರೆ..

ಈಗಾಗಲೇ ಕುರುಕ್ಷೇತ್ರ 2D ಕಾಪಿ ಸಿದ್ಧವಾಗಿದ್ದು, ಥ್ರಿಡಿ ವರ್ಷನ್ ಕೆಲಸಗಳು ನಡೀತಿದೆ. ಇದೊಂದು ಮಹತ್ವಾಕಾಂಕ್ಷೆಯ ಸಿನಿಮಾ. ಹಾಗಾಗಿ ಕ್ವಾಲಿಟಿ ವಿಚಾರದಲ್ಲಿ ರಾಜಿಯಾಗೋಕೆ ನಿರ್ಮಾಪಕ ಮುನಿರತ್ನ ಸಿದ್ಧರಿಲ್ಲ. ಪ್ರೇಕ್ಷಕರಿಗೆ ತೋರಿಸೋಕೆ ಸಿನಿಮಾ ಪರ್ಫೆಕ್ಟ್​ ಅನ್ನೊವರೆಗೂ ಸಿನಿಮಾವನ್ನ ತಿದ್ದಿ ತೀಡುವ ಪ್ರಯತ್ನದಲ್ಲಿದ್ದಾರೆ ನಿರ್ಮಾಪಕರು. ಅದೇ ಕಾರಣಕ್ಕೆ ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್​ಗೆ ಪ್ಲಾನ್ ನಡೀತಿದ್ಯಂತೆ. ಈ ವರ್ಷವಂತೂ ತೆರೆಮೇಲೆ ಸಾರಥಿ ದರ್ಶನವಾಗೇಯಿಲ್ಲ. ಅದ್ಕೆ ಹೇಳಿದ್ದು ಇದು ದಚ್ಚು ಫ್ಯಾನ್ಸ್ ಅರಗಿಸಿಕೊಳ್ಳಲಾಗದ ಸುದ್ದಿ ಅಂತ.

ಕುರುಕ್ಷೇತ್ರಕ್ಕೂ ಮೊದ್ಲೆ ಬರ್ತಾರಾ ಜ್ಯೂನಿಯರ್ ಯಜಮಾನ..?

ಫೆಬ್ರವರಿಯಲ್ಲಿ ರಿಲೀಸ್ ಆಗುತ್ತಾ ದರ್ಶನ್- ರಶ್ಮಿಕಾ ಸಿನಿಮಾ..?

ಕುರುಕ್ಷೇತ್ರ ಏಪ್ರಿಲ್​ಗೆ ಬರೋದಾದ್ರೆ, ಅದಕ್ಕೂ ಮೊದಲು ಯಜಮಾನ ಸಿನಿಮಾ ರಿಲೀಸ್ ಆಗೋ ಸಾಧ್ಯತೆಯಿದೆ. ಎರಡು ಹಾಡುಗಳ ಹೊರತಾಗಿ ಯಜಮಾನ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಪೋಸ್ಟ್ ಪ್ರೊಡಕ್ಷನ್, ಪ್ರಮೋಷನ್​ ಅಂದ್ರೂ ಇನ್ನೆರಡು ತಿಂಗಳಲ್ಲಿ ಯಜಮಾನ ತೆರೆಮೇಲೆ ದರ್ಬಾರ್ ಮಾಡಬಹುದು.

ನಾಣಿ..ಎಂಟ್ರಟ್ರೈನ್​ಮೆಂಟ್​ ಬ್ಯೂರೊ, ಟಿವಿ5

Next Story

RELATED STORIES