ಪೊಲೀಸ್ ಅಧಿಕಾರಿ ಮೇಲೆ ಮರಿತಿಬ್ಬೇಗೌಡರ ದರ್ಪ..!

X
TV5 Kannada1 Dec 2018 7:54 AM GMT
ಚಾಮರಾಜನಗರ: ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮೇಲೆ ಜೆ.ಡಿ.ಎಸ್ ಎಂ.ಎಲ್.ಸಿ ಮರಿತಿಬ್ಬೇಗೌಡ ಆವಾಜ್ ಹಾಕಿದ ಘಟನೆ ನಡೆದಿದೆ.
ಸಿಎಂ ಕಾರ್ಯಕ್ರಮಕ್ಕೆ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಮರಿತಿಬ್ಬೇಗೌಡರನ್ನು ತಡೆದ, ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಬಸವರಾಜುರನ್ನು ಬಾಯಿಗೆ ಬಂದಂತೆ ನಿಂದಿಸಿದ ವೀಡಿಯೋ ವೈರಲ್ ಆಗಿದೆ.
ನಾನು ಯಾರೆಂದು ನಿಂಗೆ ಗೊತ್ತಿಲ್ವಾ..?ನನ್ನ ಗಾಡಿಯನ್ನೇ ತಡೆಯುತ್ತಿಯಾ..?ಇಂದು ಕಾರ್ಯಕ್ರಮಕ್ಕೆ ಹೋಗದಿದ್ದರೂ ಪರ್ವಾಗಿಲ್ಲ, ನಿನ್ನ ಸಸ್ಪೆಂಡ್ ಮಾಡಿಸುತ್ತೇನೆ ಎಂದು ಆವಾಜ್ ಹಾಕಿ, ಕೆಲ ಕಾಲ ರಾದ್ಧಾಂತ ಸೃಷ್ಟಿಸಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
Next Story