ರಾಜಮೌಳಿ #RRR ಸಿನಿಮಾದಲ್ಲಿ ವಿಲನ್ ಕಿಚ್ಚ ಸುದೀಪ್..?!

ನಿರ್ದೇಶಕ ರಾಜಮೌಳಿ RRR ಸಿನಿಮಾದ ರೋಲೊಂದಕ್ಕೆ ಒಪ್ಪುವಂತ ಕಲಾವಿದನ ಹುಡುಕಾಟದಲ್ಲಿರೋದು ನಿಜ. ಈಗಾಗಲೇ ಆ ಪಾತ್ರಕ್ಕಾಗಿ ಒಂದಷ್ಟು ಕಲಾವಿದರನ್ನ ಊಹಿಸಿಕೊಂಡಿದ್ದಾರಂತೆ. ಅದೇ ರೀತಿ ಬಾಲಿವುಡ್ ಸಿಂಗಂ ಅಜಯ್ ದೇವಗನ್ ಆ ಪಾತ್ರದಲ್ಲಿ ನಟಿಸ್ತಾರೆ. ಈಗಾಗಲೇ ಈ ಬಗ್ಗೆ ಅಜಯ್ ದೇವ್ಗನ್ನ ಮೌಳಿ ಸಂಪರ್ಕಿಸಿದ್ದಾರೆ ಅಂತ ಬಾಲಿವುಡ್ನಲ್ಲಿ ಗುಲ್ಲಾಗಿದೆ.
ಯಶ್- ಅಜಯ್ ದೇವಗನ್ ನಂತ್ರ ಆ ಪಾತ್ರಕ್ಕೆ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಹೆಸರು ಕೇಳಿ ಬರ್ತಿದೆಯಂತೆ. ಹೀಗಂತ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.ಈಗಾಗಲೇ ಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಿಚ್ಚ ಅಬ್ಬರಿಸಿದ್ರು.. ಕಿಚ್ಚನ ಪಾತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
ಈಗ ನಂತ್ರ ಬಾಹುಬಲಿ ದಿ ಬಿಗಿನಿಂಗ್ ಸಿನಿಮಾದಲ್ಲಿ ಅಸ್ಲಂ ಖಾನ್ ಅನ್ನೋ ಮುಸ್ಲಿಂ ದೊರೆ ಪಾತ್ರದಲ್ಲಿ ಕಿಚ್ಚ ಕಮಾಲ್ ಮಾಡಿದ್ರು.. ರಾಜಮೌಳಿ, ರಾಮ್ ಗೋಪಾಲ್ ವರ್ಮಾ ರೀತಿಯ ಸ್ಟಾರ್ ಡೈರೆಕ್ಟರ್ಗಳೇ ಕಿಚ್ಚನ ನಟನೆಯನ್ನ ಮೆಚ್ಚಿ ಕೊಂಡಾಡಿದ್ದಾರೆ.. ಸದ್ಯ ತೆಲುಗಿನ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ.. ಹಾಗಾಗಿ RRR ಸಿನಿಮಾದಲ್ಲೂ ನಟಿಸ್ತಾರಾ ಅನ್ನೋ ಅನುಮಾನ ಮೂಡಿದೆ.
ಸ್ಯಾಂಡಲ್ವುಡ್ನಿಂದ ಹಾಲಿವುಡ್ವರೆಗೂ ಸೌಂಡ್ ಮಾಡ್ತಿರೋ ಕನ್ನಡಿಗ ಕಿಚ್ಚ ಸುದೀಪ್.. ಕಿಚ್ಚನ ಅಭಿನಯಕ್ಕೆ ಎಂತಹವರು ಫಿದಾ ಆಗಲೇಬೇಕು.. ಅದು ಎಂತಹದ್ದೇ ಪಾತ್ರ ಆದ್ರೂ, ಕಿಚ್ಚ ಪರಕಾಯ ಪ್ರವೇಶ ಮಾಡಬಲ್ಲರು.. ಜೂನಿಯರ್ ಎನ್ಟಿಆರ್- ರಾಮ್ ಚರಣ್ ರಂತಹ ನಟರಿಗೆ ಸರಿಸಮನಾಗಿ ನಟಿಸೋ ತಾಕತ್ತು ಕಿಚ್ಚನಿಗಿದೆ.. ಹಾಗಾಗಿ ಮೌಳಿ ಸಿನಿಮಾಗೆ ಕಿಚ್ಚ ಬೆಸ್ಟ್ ಆಪ್ಷನ್.
RRR ಸಿನಿಮಾದಲ್ಲಿ ಸುದೀಪ್ ನಟಿಸೋದ್ರ ಬಗ್ಗೆ ಮೌಳಿ ತಂಡದಿಂದಾಗಲೀ, ಸುದೀಪ್ ಬಳಗದಿಂದಾಗಲಿ ಯಾವುದೇ ಮಾಹಿತಿ ಸಿಕ್ಕಿಲ್ಲ.. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ.. ಪೈಲ್ವಾನ್, ಕೋಟಿಗೊಬ್ಬ-3, ಸೈರಾ ನರಸಿಂಹ ರೆಡ್ಡಿ, ರೈಸನ್ ಹೀಗೆ ಸ್ಯಾಂಡಲ್ವುಡ್ನಿಂದ ಹಾಲಿವುಡ್ವರೆಗೂ ಕಿಚ್ಚ ಕೆಲಸ ಮಾಡ್ತಿದ್ದಾರೆ.. ಇದೆಲ್ಲದರ ಮಧ್ಯೆ ಮೌಳಿಯ RRR ಚಿತ್ರದಲ್ಲಿ ಸುದೀಪ್ ನಟಿಸ್ತಾರಾ ನೋಡ್ಬೇಕು.