ಕಲಬುರಗಿ ಕೊಲೆ ಪ್ರಕರಣ ಎಸ್ಐಟಿಗೆ ವರ್ಗಾಯಿಸಲು ನಿರ್ಧಾರ

X
TV5 Kannada1 Dec 2018 5:52 AM GMT
ಹಿರಿಯ ಸಂಶೋಧಕ ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನ ಸಿಐಡಿಯಿಂದ ಎಸ್ಐಟಿ ತನಿಖೆಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.
2015ರ ಆಗಸ್ಟ್ 30ರಂದು ನಡೆದಿದ್ದ ಕಲಬುರಗಿ ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗದ ಕಾರಣ, ಗೌರಿ ಲಂಕೇಶ್ ಹತ್ಯೆ ತನಿಖೆ ನಡೆಸಿದ ತಂಡಕ್ಕೆ ಪ್ರಕರಣವನ್ನ ವರ್ಗಾವಣೆ ಮಾಡಲಾಗಿದೆ.
ಕಲಬುರಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಇನ್ನೂ ಪತ್ತೆಹಚ್ಚದ ಕಾರಣ, ಕಲಬುರಗಿ ಪತ್ನಿ ಉಮಾದೇವಿ ಸುಪ್ರೀಂ ಮೊರೆ ಹೋಗಿದ್ದರು. ಈ ಕಾರಣಕ್ಕೆ ರಾಜ್ಯ ಸರ್ಕಾರದ ಮೇಲೆ ಗರಂ ಆಗಿದ್ದ ಸುಪ್ರೀಂ, ವಿಚಾರಣೆ ನಡೆಸಿ ತನಿಖಾ ವರದಿ ನೀಡುವಂತೆ ಸೂಚಿಸಿತ್ತು. ಅಲ್ಲದೇ 2 ದಿನಗಳ ಹಿಂದೆ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಈ ಹಿನ್ನೆಲೆ ಡಿಸಿಎಂ ಪರಮೇಶ್ವರ್ ಸಭೆ ನಡೆಸಿ, ಪ್ರಕರಣ ಸಿಐಡಿಯಿಂದ ಡಿಸಿಪಿ ಅನುಚೇತ್ ನೇತೃತ್ವದ ಎಸ್ಐಟಿಗೆ ವರ್ಗಾಯಿಸಲು ತಿರ್ಮಾನಿಸಿದ್ದಾರೆ.
Next Story