ನಾನು ದಿನನಿತ್ಯ ಹದಿನಾಲ್ಕು ಪತ್ರಿಕೆ ಓದುತ್ತೇನೆ:ಹೆಚ್ಡಿಕೆ

X
TV5 Kannada1 Dec 2018 9:50 AM GMT
ನಾನು ದಿನನಿತ್ಯ ಹದಿನಾಲ್ಕು ಪತ್ರಿಕೆ ಓದುತ್ತೇನೆ ಪತ್ರಿಕೆಗಳನ್ನು ಓದಿಯೇ ಜ್ಞಾನ ಹೆಚ್ಚಿಸಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಮಹದೇವ್ ಪ್ರಕಾಶ್ ಬರೆದಿರುವ ಹೊರಳು ನೋಟ ಪುಸ್ತಕ ಬಿಡುಗಡೆ ಮಾಡಿದ ನಂತರ ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಡಿದ ಅವರು ಹಲವು ದಿಗ್ಗಜರು ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಇತ್ತೀಚಿನ ಮಾಧ್ಯಮಗಳ ಬಗ್ಗೆ ನಾನು ಮಾತನಾಡುವುದಿಲ್ಲ, ಮಾಧ್ಯಮದ ಲೇಖನಿಗೆ ಗುಂಡೇಟಿಗಿಂತ ಶಕ್ತಿಯಿದೆ, ಅವರು ನಮ್ಮ ಕಣ್ಣುತೆರೆಸುತ್ತಾರೆ ಎಂದರು.
ನಮ್ಮ ಯುವಜನಾಂಗ ದಾರಿ ತಪ್ಪುತ್ತಿದೆ ಅದಕ್ಕೆ ನಮ್ಮ ಮಾಧ್ಯಮಗಳು ಪ್ರೇರೇಪಿಸಬಾರದು. ಹಿಂದಿನ ಕಾಲದಲ್ಲಿ ಪತ್ರಕರ್ತರು ಸಮಾಜಕ್ಕೆ ಕೊಡುಗೆ ನೀಡುತ್ತಿದ್ದರು ಎಂದರು. ಇತ್ತೀಚ್ಚೆಗೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಅದ್ದರಿಂದ ಮಾಧ್ಯಮದವರು ಮತ್ತು ಪತ್ರಿಕೆಗಳು ಒಳ್ಳೆಯ ಮಾಹಿತಿಯನ್ನು ಜನರಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
Next Story