Top

ತನ್ನ ಕುಟುಂಬವನ್ನೇ ಕೊಂದ ಯಮರೂಪಿ ವೈದ್ಯ..!

ತನ್ನ ಕುಟುಂಬವನ್ನೇ ಕೊಂದ ಯಮರೂಪಿ ವೈದ್ಯ..!
X

ಅನಾರೋಗ್ಯದ ಹಿನ್ನೆಲೆಯಲ್ಲಿ ಬೇಸತ್ತು ತಾಯಿ ತಂಗಿಗೆ ಚುಚ್ಚುಮದ್ದು ನೀಡಿ ಸಾಯಿಸಿದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜರಾಜೇಶ್ವರಿ ನಗರದ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.

2002ರಿಂದ ಆರ್ ಆರ್ ನಗರದಲ್ಲಿ ನಾಲ್ವರು ವಾಸವಾಗಿದ್ದರು. ತಂದೆ ಸುಬ್ಬರಾಯ ಭಟ್, ಪತ್ನಿ ಮೂಕಾಂಬಿಕಾ ಹಾಗೂ ಮಕ್ಕಳಾದ ಗೊಂವಿದ ಪ್ರಸಾದ್ ಹಾಗೂ ಶ್ಯಾಮಲಾ ವಾಸವಿದ್ದರು. ಇಡೀ ಕುಟುಂಬ ಸಕ್ಕರೆ ಖಾಯಿಲೆಯಿಂದ ಬಳಲ್ತಿತ್ತು.ಇದರಿಂದ ಎದುರಾಗಿದ್ದ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಕುಕೃತ್ಯವನ್ನು ವೃತ್ತಿಯಲ್ಲಿ ಡಯಾಬಿಟಿಸ್ ಸ್ಪೆಷಲಿಸ್ಟ್ ಆಗಿರುವ ಗೊವಿಂದ ಪ್ರಸಾದ್ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಸುಬ್ಬರಾಯ್ ಅವರು ಕಾಲು ನೋವಿನಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 11 ಗಂಟೆಗೆ ಕಾಲು ನೋವಿಗೆ ಮಾತ್ರೆ ತೆಗೆದುಕೊಂಡು ಮಲಗಿದ್ದರು. ಬಳಿಕ ಬೆಳಿಗ್ಗೆ ಎದ್ದು ನೋಡಿದಾಗ ಮೂವರು ಮನೆಯಲ್ಲಿ ಅಂಗಾತ ಮಲಗಿದ್ದರು. ಅನುಮಾನಗೊಂಡು ಸಂಬಂಧಿಕರಿಗೆ ತಿಳಿಸಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಆದ್ರೆ, ಇದೇ ವೇಳೆ ಉಸಿರಾಡುತಿದ್ದ ಮಗ ಡಾ. ಗೊವಿಂದ ಪ್ರಸಾದ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ತಂದೆ ಸುಬ್ಬರಾಯ್ ಭಟ್ ದಾಖಲಿಸಿದ್ದಾರೆ.

ಡೆತ್ ನೋಟ್ ನಲ್ಲಿ ತಂಗಿ ಶ್ಯಾಮಲಾಗಿದ್ದ ಅನಾರೋಗ್ಯ ಸಮಸ್ಯೆ ಹಾಗೂ ತನಗೆ ಮದುವೆಯಾಗಿಲ್ಲ ಎಂಬ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿದ್ದಾಗಿ ಡಾ. ಗೊವಿಂದ ಪ್ರಸಾದ್ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

Next Story

RELATED STORIES