Top

ಅಂಬಿ ಬಗ್ಗೆ ಹೇಳಲು ಏನಂತ ಪದಗಳನ್ನು ಹುಡಕಲಿ?

ಅಂಬಿ ಬಗ್ಗೆ ಹೇಳಲು ಏನಂತ ಪದಗಳನ್ನು ಹುಡಕಲಿ?
X

ಅಂಬರೀಶ್ ಬಗ್ಗೆ ನಾನು ಏನೆಂದು ಹೇಳಲಿ.. ಅವರ ಬಗ್ಗೆ ಹೇಳಲು ಏನಂತ ಪದಗಳನ್ನು ಹುಡುಕಲಿ? ಅವರು ನನ್ನೊಬ್ಬನ ಅಂಬಿ ಆಗಿಲಿಲ್ಲ. ಅವರು ಎಲ್ಲರ ಅಂಬಿ ಆಗಿದ್ದರು ಎಂದು ಪತ್ನಿ ಸುಮಲತಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಅಂಬಿ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬರೀಶ್ ಬಗ್ಗೆ ನನಗೆ 22 ವರ್ಷಗಳಿಂದ ಗೊತ್ತು. ಆದರೆ ನನಗಿಂತ ಚೆನ್ನಾಗಿ ಅವರು ಎಲ್ಲರಿಗೂ ಗೊತ್ತು. ನನ್ನ ಪಾಲಿಗೆ ಅವರು ಕೇವಲ ಗಂಡನಾಗಿರಲಿಲ್ಲ. ಸ್ನೇಹಿತ, ತಂದೆ, ಅಣ್ಣ.. ಹೀಗೆ ಎಲ್ಲವೂ ಆಗಿದ್ದರು ಎಂದರು.

ರಾಜನಂತೆ ಬಾಳಿದ ಅಂಬರೀಶ್ ಅವರನ್ನು ರಾಜನಾಗಿಯೇ ಕಳುಹಿಸಿಕೊಟ್ಟರು. ಮಂಡ್ಯದ ಜನತೆಗೂ ಅಂತಿಮ ದರ್ಶನ ಮಾಡಿಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಮ್ಮ ಪರವಾಗಿ ಹಾಗೂ ಅಭಿಮಾನಿಗಳ ಪರವಾಗಿ ಸುಮಲತಾ ಧನ್ಯವಾದ ಸಲ್ಲಿಸಿದರು.

ಅಂಬರೀಶ್ ಕೇವಲ ನಟನಾಗಿರಲಿಲ್ಲ. ರಾಜಕಾರಣಿ, ಸ್ನೇಹಿತ, ಬಂಧು.. ಹೀಗೆ ಎಲ್ಲರಿಗೆ ಎಲ್ಲವೂ ಆಗಿದ್ದರು. ಅವರನ್ನು ಉತ್ತಮ ನಟನನ್ನಾಗಿ ಮಾಡಿದ ನಿರ್ಮಾಪಕರು, ರಾಜಕಾರಣಿ ಮಾಡಿದ ಗಣ್ಯರು ಎಲ್ಲರಿಗೂ ನನ್ನ ವಂದನೆಗಳು ಎಂದು ಸುಮಲತಾ ಹೇಳಿದರು.

Next Story

RELATED STORIES