ಆತ್ಮಹತ್ಯೆಗೆ ಶರಣಾದ ತಮಿಳು ನಟಿ ರಿಯಾಮಿಕಾ..!

ತಮಿಳು ನಟಿ ರಿಯಾಮಿಕಾ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಕುಂದರತ್ತಿಲ್ಲೇ, ಕುಮಾರಾ ನುಕ್ಕು, ಕೊಂದಟ್ಟಮ್ ಮತ್ತು ಅಘೋರಿ ಇನ್ ಅಟ್ಟಮ್ ಅರಂಬಮ್ ಚಿತ್ರದಲ್ಲಿ ಈಕೆ ನಟಿಸಿದ್ದಾಳೆ.
ರಿಯಾಮಿಕಾ ತನ್ನ ಸಹೋದರ ಪ್ರಕಾಶ್ನೊಂದಿಗೆ ವಾಲಸರವಕ್ಕಂನ ಶ್ರೀದೇವಿ ಕುಪ್ಪಂನಲ್ಲಿ ವಾಸಿಸುತ್ತಿದ್ದಳು. ಕಳೆದ ರಾತ್ರಿ ಆಕೆ ಮನೆಗೆ ಬಂದಾಗ ಬೇಸರದಲ್ಲಿದ್ದಳು ಎಂದು ಆಕೆಯ ಸಹೋದರ ಪ್ರಕಾಶ್ ತಿಳಿಸಿದ್ದಾರೆ.
ಅಲ್ಲದೇ ಮಂಗಳವಾರ ರಾತ್ರಿ ರಿಯಾಮಿಕಾ ತನ್ನ ಪ್ರಿಯಕರ ದಿನೇಶ್ಗೆ ಕೊನೆಯ ಬಾರಿ ಕರೆ ಮಾಡಿ ಮಾತನಾಡಿದ್ದಾಳೆ. ಆದರೆ ಬುಧವಾರ ದಿನೇಶ್ ಆಕೆಗೆ ಕರೆ ಮಾಡಿದಾಗ, ಆಕೆ ಕರೆ ಸ್ವೀಕರಿಸಲಿಲ್ಲ. ಈ ಕಾರಣಕ್ಕಾಗಿ ದಿನೇಶ್ ರಿಯಾಮಿಕಾಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾನೆ.
ರಿಯಾಮಿಕಾ ಮನೆಗೆ ಬಂದ ದಿನೇಶ್, ಪ್ರಕಾಶ್ನನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾನೆ. ಇಬ್ಬರೂ ಸೇರಿ ರಿಯಾಮಿಕಾ ರೂಮ್ ಬಾಗಿಲು ತಟ್ಟಿದ್ದಾರೆ. ಎಷ್ಟು ಹೊತ್ತಾದರೂ ರಿಯಾಮಿಕಾ ಬಾಗಿಲು ತೆಗೆಯದ ಕಾರಣ, ಪ್ರಕಾಶ್ ಬಾಗಿಲು ಒಡೆದು ಒಳನುಗ್ಗಿದ್ದಾನೆ. ಆಗ ರಿಯಾಮಿಕಾ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.
ತಮಿಳಿನಲ್ಲಿ 3ರಿಂದ 4 ಚಿತ್ರಗಳಲ್ಲಿ ನಟಿಸಿದ್ದ ರಿಯಾಮಿಕಾ, ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಅಲ್ಲದೇ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಈ ಕಾರಣಕ್ಕಾಗಿ ರಿಯಾಮಿಕಾ ನೇಣಿಗೆ ಶರಣಾಗಿರಬಹುದು ಎನ್ನಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಸ್ಥಳೀಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.