ನಟ ರಿಷಿ ಕಪೂರ್ ಪೂರ್ವಜರ ನಿವಾಸ ಈಗ ಮ್ಯೂಸಿಯಂ..!

X
TV5 Kannada30 Nov 2018 4:51 AM GMT
ಇಸ್ಲಾಮಾಬಾದ್: ಪೇಶಾವರದಲ್ಲಿರುವ ರಿಷಿ ಕಪೂರ್ ಪೂರ್ವಜರ ನಿವಾಸವನ್ನ ಮ್ಯೂಸಿಯಂ ಮಾಡಬೇಕೆಂಬ ರಿಷಿ ಆಗ್ರಹಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ.
ಪಾಕಿಸ್ತಾನದ ಪೇಷಾವರದಲ್ಲಿರುವ ನಟ ರಿಷಿ ಕಪೂರ್ ಪೂರ್ವಜರ ಮನೆಯನ್ನ ಮ್ಯೂಸಿಯಂ ಮಾಡಬೇಕೆಂದು ರಿಷಿ ಕಪೂರ್ ಮಾಡಿದ್ದ ಮನವಿಗೆ ಪಾಕ್ ಸರ್ಕಾರ ಸಮ್ಮತಿ ಸೂಚಿಸಿದೆ.
ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಈ ಬಗ್ಗೆ ಮಾತನಾಡಿದ್ದು, ರಿಷಿ ಕಪೂರ್ ಕರೆ ಮಾಡಿ ಈ ಬಗ್ಗೆ ಮನವಿ ಮಾಡಿದ್ದು, ಪಾಕಿಸ್ತಾನ ಸರ್ಕಾರ ರಿಷಿ ಪೂರ್ವಜರ ಮನೆಯನ್ನ ಮ್ಯೂಸಿಯಂ ಮಾಡಲು ಸಿದ್ಧವಿದೆ ಎಂದಿದ್ದಾರೆ.
ಪಾಕಿಸ್ತಾನದ ಪೇಶಾವರ್ದಲ್ಲಿರುವ ಕಪೂರ್ ಹವೇಲಿ ಕಿಸ್ಸಾ ಖ್ವಾನಿ ಬಾಜಾರನ್ನ ಬಾಲಿವುಡ್ನ ಖ್ಯಾತ ನಟ ಪೃಥ್ವಿರಾಜ್ ಕಪೂರ್ ತಂದೆ ಬಶೇಸ್ವರ್ನಾಥ್ ಕಪೂರ್ ನಿರ್ಮಿಸಿದ್ದರು.
ಅಲ್ಲದೇ ಬಾಲಿವುಡ್ ಫೇಮಸ್ ನಟ, ರಾಜ್ ಕಪೂರ್ ಡಿಸೆಂಬರ್ 14, 1924ರಂದು ಪೇಶಾವರದಲ್ಲಿ ಜನಿಸಿದ್ದರು. ತದನಂತರ 1947ರಲ್ಲಿ ಕಪೂರ್ ಮನೆತನ ಪಾಕಿಸ್ತಾನವನ್ನ ಬಿಟ್ಟು ಭಾರತಕ್ಕೆ ಬಂದಿತು.
Next Story