Top

ಪೊಲೀಸರಿಗೆ ಧಮ್ಕಿ ಹಾಕಿದ ರೇಣುಕಾಚಾರ್ಯ

ಪೊಲೀಸರಿಗೆ ಧಮ್ಕಿ ಹಾಕಿದ ರೇಣುಕಾಚಾರ್ಯ
X

ಆಕ್ರಮ ಮರಳು ಸಾಗಟ ಮಾಡಲು ಪೊಲೀಸರು ಅನುಮತಿ ನೀಡದ ಕಾರಣ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪೊಲೀಸರಿಗೆ ದಬಾಯಿಸಿದ ಘಟನೆ ದಾವಣಗೆರೆಯಲ್ಲಿ ಶುಕ್ರವಾರ ನಡೆದಿದೆ.

ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳು ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೇಣುಕಾಚಾರ್ಯ, ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಮುಕ್ತವಾಗಿ ಮರಳು ಪೂರೈಸುವ ಕೆಲಸ ಮಾಡುತ್ತಿದ್ದಾರೆ.

ಶುಕ್ರವಾರ ಟ್ಯಾಕ್ಟರ್ ನಲ್ಲಿ ಮರಳು ತರುತ್ತಿದ್ದ ವ್ಯಕ್ತಿಯನ್ನು ತಡೆದು ಮೊಬೈಲ್ ಹಾಗೂ ಪರ್ಮಿಟ್ ಕಸಿದು ಕೊಂಡಿದ್ದ ಪೊಲೀಸರಿಗೆ ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡರು.

ಪರ್ಮಿಟ್ ಇದ್ದರೂ ಪೊಲೀಸರಿಂದ ಪದೇ ಪದೇ ಸಾರ್ವಜನಿಕರಿಗೆ ಕುರುಕುಳ ನೀಡಲಾಗುತ್ತಿದೆ ಎಂದು ಪೋನ್ ನಲ್ಲಿಯೇ ಇನ್​ಪೆಕ್ಟರ್​ಗೆ ಶಾಸಕ ರೇಣುಕಾಚಾರ್ಯ ದಬಾಯಿಸಿದರು.

Next Story

RELATED STORIES