Top

ರಮೇಶ್‌ ಜಾರಕಿಹೊಳಿ ನಾನು ಬೆಸ್ಟ್ ಫ್ರೆಂಡ್ಸ್: ಡಿ ಕೆ ಶಿವಕುಮಾರ್

ರಮೇಶ್‌ ಜಾರಕಿಹೊಳಿ ನಾನು ಬೆಸ್ಟ್ ಫ್ರೆಂಡ್ಸ್: ಡಿ ಕೆ ಶಿವಕುಮಾರ್
X

ಸಂಪುಟ ವಿಸ್ತರಣೆ, ನಿಗಮ - ಮಂಡಳಿ ಅಧ್ಯಕ್ಷರ ನೇಮಕ ವಿಳಂಬಕ್ಕೆ ಕೈ ಶಾಸಕರು ಆಕ್ರೋಶಗೊಂಡಿದ್ದಾರೆ. ಹೀಗಾಗಿ, ಸದ್ದಿಲ್ಲದೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅಸಮಾಧಾನಿತರೆಲ್ಲ ಒಂದುಗೂಡ್ತಿದ್ದಾರೆಂಬ ಮಾಹಿತಿ ಹೊರಬಿದ್ದಿದೆ.

ಶೀಘ್ರದಲ್ಲಿಯೇ 10ಕ್ಕೂ ಹೆಚ್ಚು ಶಾಸಕರು ಬೇರೆ ರಾಜ್ಯಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ. ಶಾಸಕ ಪ್ರಸಾದ್ ಅಬ್ಬಯ್ಯ, ಪ್ರತಾಪ್ ಗೌಡ ಪಾಟೀಲ್, ರಹೀಂಖಾನ್, ಮಹೇಶ್ ಕುಮ್ಮಟಳ್ಳಿ, ಡಾ.ಸುಧಾಕರ್, ಎಂಟಿಬಿ ನಾಗರಾಜು, ನಾಗೇಂದ್ರ, ಆನಂದ್ ಸಿಂಗ್ ಸೇರಿದಂತೆ ಕೆಲವು ಶಾಸಕರು ರಮೇಶ್ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿದ್ದಾರೆ.

ಇವೆರಲ್ಲ ಸಂಪುಟ ವಿಸ್ತರಣೆ ವಿಳಂಬ ಹಾಗೂ ಕ್ಷೇತ್ರಕ್ಕೆ ಸಮರ್ಪಕ ಅನುದಾನ ದೊರೆಯದಿದ್ದರಿಂದ ಸರ್ಕಾರದ ವಿರುದ್ಧ ಬುಸುಗುಡುತ್ತಿದ್ದಾರೆ ಅಂತ ತಿಳಿದುಬಂದಿದೆ. ವದಂತಿ ಅಲ್ಲಗಳೆದಿರುವ ರಮೇಶ್ ಜಾರಕಿಹೊಳಿ, ನಾವು ಬಾಂಬೆಗೂ ಹೋಗ್ತಿಲ್ಲ, ಎಲ್ಲಿಗೂ ಹೋಗ್ತಿಲ್ಲ.ನಾವೆಲ್ಲ ಇಲ್ಲೇ ಇದ್ದೇವೆ. ನಮ್ಮ ಪಕ್ಷದ ಕೆಲವು ಪ್ರಭಾವಿಗಳು ನನ್ನ ಮೇಲೆ ಎತ್ತಿಕಟ್ಟುವ ಕೆಲಸ ಮಾಡ್ತಿರಬಹುದು ಅಂತ ಡಿ ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಅತೃಪ್ತ ಶಾಸಕರು ಒಂದಾಗ್ತಿದ್ದಾರೆಂಬ ಊಹಾಪೋಹಗಳಿಗೆ ಪುಷ್ಠಿ ನೀಡುವಂತೆ ಪೌರಡಳಿತ ಸಚಿವರ ನಿವಾಸಕ್ಕೆ ಬಿಜೆಪಿಯ ಮೂವರು ಶಾಸಕರು ಒಬ್ಬರಾದ ಮೇಲೊಬ್ಬರಂತೆ ಭೇಟಿ ನೀಡಿ ಮಾತುಕತೆ ನಡೆಸಿದರು. ತೇರದಾಳ ಶಾಸಕ ಸಿದ್ದು ಸವದಿ, ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ರಮೇಶ್‌ ಜಾರಕಿಹೊಳೆ ಜೊತೆ ಸಮಾಲೋಚನೆ ನಡೆಸಿದರು. ಬಿಜೆಪಿ ಶಾಸಕರ ಭೇಟಿ ನಂತ್ರ ಹರಿಹರ ಶಾಸಕ ರಾಮಪ್ಪ ಕೂಡ ಬಂದು ಹೋದರು.

ಆದರೆ, ಇದಕ್ಕೆ ಬಿಜೆಪಿ ಶಾಸಕರ ಹೇಳೊದೇ ಬೇರೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಚಿವರ ಜೊತೆ ಚರ್ಚಿಸಿದ್ದೇವೆಯೇ ಹೊರತು ನಾವ್ಯಾರು ಬಿಜೆಪಿಗೆ ಬನ್ನಿ ಅಂತ ಆಫರ್ ನೀಡಿಲ್ಲ ಅಂತ ಊಹಾಪೋಹಾ ನಿರಾಕರಿಸಿದರು.

ಮಾಧ್ಯಮಗಳಲ್ಲಿ ರಮೇಶ್ ಜಾರಕಿಹೊಳಿ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದ್ದ ಹಾಗೆ, ರಾಜನಹಳ್ಳಿ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದ ಶ್ರೀಗಳು ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿರುವ ಸಚಿವರ ನಿವಾಸಕ್ಕೆ ಎಂಟ್ರಿ ಕೊಟ್ರು. ನಿಮ್ಮನ್ನು ಪ್ರಚೋದಿಸುವ ಕೆಲಸ ಮಾಡ್ತಿದ್ದಾರೆ.ನೀವು ಯಾವುದಕ್ಕೂ ಹೆದರಬೇಡಿ. ನಿಮ್ಮ ಕೆಲಸಕ್ಕೆ ಹೆಚ್ಚಿನ ಆಧ್ಯತೆ ನೀಡಿ ಅಂತ ಸಲಹೆ ನೀಡಿದ್ದಾರೆ.

ಇನ್ನೂ ರಮೇಶ್ ಜಾರಕಿಹೊಳಿಯ ಪರೋಕ್ಷ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ಇದೆಲ್ಲಾ ಮಾಧ್ಯಮದ ಸೃಷ್ಟಿ. ಅವರು ನನ್ನ ಬೆಸ್ಟ್ ಫ್ರೆಂಡ್ ಅಂತ ವಿಷಾಯಾಂತರ ಮಾಡಿದರು.

ಒಟ್ಟಿನಲ್ಲಿ ಚಳಿಗಾಲದ ಅಧಿವೇಶನ ಹೊಸ್ತಿಲಲ್ಲಿರುವಾಗಲೇ ಕಾಂಗ್ರೆಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸಂಪುಟ ವಿಸ್ತರಣೆ ನೆಪದಲ್ಲಿ ನಾಯಕರ ವಿರುದ್ಧ ಶಾಸಕರು ತಿರುಗಿಬಿದ್ದಿದ್ದಾರೆ.

Next Story

RELATED STORIES