Top

ಕುದುರೆ ಏರೋಕ್ಕೆ ಉತ್ಸುಕರಾಗಿದ್ದಾರಂತೆ ನಿಕ್ ಜೊನಾಸ್

ಕುದುರೆ ಏರೋಕ್ಕೆ ಉತ್ಸುಕರಾಗಿದ್ದಾರಂತೆ ನಿಕ್ ಜೊನಾಸ್
X

ಡಿಸೆಂಬರ್ 1 ಮತ್ತು 2ರಂದು ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮತ್ತು ಹಾಲಿವುಡ್ ನಟ ನಿಕ್ ಜೊನಾಸ್ ಹಸೆಮಣೆ ಏರೋಕ್ಕೆ ರೆಡಿಯಾಗಿದ್ದಾರೆ.

ಇಂದಿನಿಂದಲೇ ಸಾಂಪ್ರದಾಯಿಕ ಕಾರ್ಯಕ್ರಮಗಳು ಶುರುವಾಗಿದ್ದು, ನಿಕ್-ಪ್ರಿಯಾಂಕಾ ಭಾರತೀಯ ಉಡುಗೆಯಲ್ಲಿ ಮಿಂಚಿದ್ದಾರೆ.

ಇನ್ನು ಉತ್ತರಭಾರತೀಯ ಮದುವೆ ಕಾರ್ಯಕ್ರಮದಲ್ಲಿ ಮಧುಮಗ ಕುದುರೆಯೇರಿ ಹೆಣ್ಣಿನ ಮನೆಗೆ ಬರುವುದು ವಾಡಿಕೆ. ಈ ಬಗ್ಗೆ ಪ್ರಿಯಾಂಕಾ ನಿಕ್‌ಗೆ ಪ್ರಶ್ನಿಸಿದ್ದು, ಕುದುರೆ ಸವಾರಿ ಮಾಡಲು ಸಾಧ್ಯವಾ ಎಂದು ಕೇಳಿದ್ದಾಳೆ. ಇದಕ್ಕೆ ಉತ್ತರಿಸಿದ ನಿಕ್, ನಾನು ಕುದುರೆ ಏರಲು ಉತ್ಸುಕನಾಗಿದ್ದೇನೆ ಎಂದಿದ್ದಾನೆ.

ಈಗಾಗಲೇ ಜೋಧಪುರದಲ್ಲಿ ನಿಕ್-ಪಿಗ್ಗಿ ಮದುವೆ ತಯಾರಿ ಭರದಿಂದ ಸಾಗಿದ್ದು, ಡಿಸೆಂಬರ್ 1ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ, ಡಿಸೆಂಬರ್ 2ರಂದು ಹಿಂದೂ ಸಂಪ್ರದಾಯದಂತೆ ನಿಕ್-ಪಿಗ್ಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

Next Story

RELATED STORIES