Top

ಟೈಟಲ್ ಪೋಸ್ಟರ್‌ನಿಂದಲೇ ಸೌಂಡ್ ಮಾಡ್ತಿದೆ 'ಸಿಂಗ' ಸಿನಿಮಾ

ಟೈಟಲ್ ಪೋಸ್ಟರ್‌ನಿಂದಲೇ ಸೌಂಡ್ ಮಾಡ್ತಿದೆ ಸಿಂಗ ಸಿನಿಮಾ
X

ಈ ವರ್ಷ ಚಿರಂಜೀವಿ ಸರ್ಜಾ ಅಭಿನಯದ ಮೂರು ಸಿನಿಮಾಗಳು ರಿಲೀಸ್ ಆಗಿವೆ. ರಾಜ ಮಾರ್ತಾಂಡ ಎನ್ನುವ ಮತ್ತೊಂದು ಸಿನಿಮಾ ರಿಲೀಸ್​ಗೆ ರೆಡಿಯಾಗ್ತಿದೆ. ಇದರ ಮಧ್ಯೆ ಮೇಘನಾ ರಾಜ್​ ಅವರ ಕೈ ಹಿಡಿದ ಚಿರು, ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಆ ಸಿನಿಮಾ ಹೆಸರು ಸಿಂಗ.

ಸಿಂಹ ಘರ್ಜನೆಗೆ ಸ್ಯಾಂಡಲ್​ವುಡ್ ಯುವ ಸಾಮ್ರಾಟ್ ರೆಡಿ..!

ಸಹೋದರನ ಸಿಂಗಾವತಾರಕ್ಕೆ ‘ಬಹದ್ದೂರ್ ಗಂಡು’ ಸಾಥ್..!

ಸಿಂಗ ಅನ್ನೋ ಪವರ್​ಫುಲ್ ಟೈಟಲ್​ನಲ್ಲಿ ಚಿರಂಜೀವಿ ಸರ್ಜಾ ಹೊಸ ಸಿನಿಮಾ ಮಾಡ್ತಿದ್ದಾರೆ. ರಾಮ್​ಲೀಲಾ ಖ್ಯಾತಿಯ ವಿಜಯ್ ಕಿರಣ್ ಆಕ್ಷನ್ ಕಟ್ ಹೇಳ್ತಿರೋ ಈ ಆಕ್ಷನ್ ಎಂಟ್ರಟ್ರೈನರ್ ಚಿತ್ರವನ್ನ ಉದಯ್​ ಕೆ ಮೆಹ್ತಾ ನಿರ್ಮಾಣ ಮಾಡ್ತಿದ್ದಾರೆ. ದಿ ಲಯನ್ ಅನ್ನೋ ಟ್ಯಾಗ್​ ಲೈನ್​ ಇರೋ ಸಿಂಗ ಸಿನಿಮಾ ಟೈಟಲ್​ ಪೋಸ್ಟರ್ ರಿಲೀಸ್ ಆಗಿ ಬೇಜಾನ್ ಸೌಂಡ್ ಮಾಡ್ತಿದೆ.

ಅಮ್ಮ ಐ ಲವ್ ಯೂ ಸಿನಿಮಾ ಚಿರಂಜೀವಿ ಸರ್ಜಾಗೆ ಒಳ್ಳೆ ಹೆಸರು ತಂದು ಕೊಡ್ತು. ಬಹಳ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್​ನಿಂದ ಪ್ರಶಂಸೆಗೆ ಪಾತ್ರವಾಯ್ತು. ಅದರ ಬೆನ್ನಲ್ಲೇ ಚಿರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿಂಗ ಸಿನಿಮಾದಲ್ಲಿ ಮತ್ತೊಂದು ವಿಭಿನ್ನ ಅವತಾರದಲ್ಲಿ ಮಿಂಚಲಿದ್ದಾರೆ.

ಬಚ್ಚನ್​ ಸಿನಿಮಾ ಖ್ಯಾತಿಯ ಉದಯ್​ ಕೆ ಮೆಹ್ತಾ ಧ್ರುವಾ ಸರ್ಜಾ ಜೊತೆ ಒಂದು ಸಿನಿಮಾ ಮಾಡ್ತಿದ್ದಾರೆ, ಅದಕ್ಕೂ ಮೊದ್ಲು ಚಿರು ಸಿನಿಮಾಗೆ ಬಂಡವಾಳ ಹಾಕ್ತಾರೆ ಅನ್ನೋ ಸುದ್ದಿಯನ್ನ ಈ ಮೊದಲೇ ನಾವು ಹೇಳಿದ್ವಿ. ಇದೀಗ ಬಸವೇಶ್ವರ ನಗರದ ವಿನಾಯಕ ದೇವಸ್ಥಾನದಲ್ಲಿ ಸದ್ದಿಲ್ಲದೇ ಸಿಂಗ ಸಿನಿಮಾ ಮುಹೂರ್ತ ನೆರವೇರಿಸಿದೆ ಚಿತ್ರತಂಡ. ಚಿರು ಸಹೋದರ ಧ್ರುವ ಸರ್ಜಾ ಸಿಂಗ ಮುಹೂರ್ತಕ್ಕೆ ಸಾಥ್ ಕೊಟ್ಟಿರೋದು ಮತ್ತೊಂದು ವಿಶೇಷ.

ಧ್ರುವ ಸರ್ಜಾ ಜೊತೆ ನಟಿ ತಾರಾ, ಚಿರು ಪತ್ನಿ ಮೇಘನಾ ರಾಜ್​, ಸಿಂಗ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಧ್ರುವ ನಿಶ್ಚಿತಾರ್ಥ ಬೆನ್ನಲ್ಲೇ ಶುರುವಾಗಲಿದೆ ‘ಸಿಂಗ’ ಆರ್ಭಟ

‘ಬಜಾರ್’ ನಾಯಕಿ ಜೊತೆ ಚಿರಂಜೀವಿ ಸರ್ಜಾ ರೊಮ್ಯಾನ್ಸ್

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಧ್ರುವ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್​ 9ಕ್ಕೆ ಧ್ರುವ ಪ್ರೇಯಸಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಧ್ರುವ ನಿಶ್ಚಿತಾರ್ಥ ಮುಗಿದ ನಂತರ ಸಿಂಗ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಬಜಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋ ಅದಿತಿ ಪ್ರಭು, ಸಿಂಗ ಚಿರು ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಟೈಟಲ್​ನಿಂದ್ಲೇ ಸಿಂಗ ಸಿನಿಮಾ ಬೇಜಾನ್ ಸೌಂಡ್ ಮಾಡ್ತಿದೆ.

ಧ್ರುವ ಸರ್ಜಾ ಸಾಥ್ ಸಿಕ್ಕಿರೋದ್ರಿಂದ ಸಿಂಗ ಸಿನಿಮಾಗೆ ಆನೆ ಬಲ ಬಂದಂತಾಗಿದೆ. ರಥಾವರ ಫೇಮ್ ಧರ್ಮವಿಶ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ ಸಿಂಗ ಚಿತ್ರಕ್ಕಿದೆ. ರವಿಶಂಕರ್, ತಾರಾ, ಶಿವರಾಜ್​ ಕೆ ಆರ್ ಪೇಟೆ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಸಿಂಗ ಸಿನಿಮಾ ಸೆಟ್ಟೇರಿದ ದಿನದಿಂದಲೇ ದೊಡ್ಡದಾಗಿ ಸದ್ದು ಮಾಡೋಕೆ ಶುರು ಮಾಡಿದೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

Next Story

RELATED STORIES