Top

ಕೂಗಿ ಹೇಳ್ತಿದ್ದಾರೆ ದರ್ಶನ್​ನೇ ಅಂಬರೀಶ್ ರೆಬೆಲಿಸಂನ ಉತ್ತರಾಧಿಕಾರಿ

ಕೂಗಿ ಹೇಳ್ತಿದ್ದಾರೆ ದರ್ಶನ್​ನೇ ಅಂಬರೀಶ್ ರೆಬೆಲಿಸಂನ ಉತ್ತರಾಧಿಕಾರಿ
X

ಅಂಬರೀಶ್ ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಇದು ನಾವೆಲ್ಲಾ ಡೈಜೆಸ್ಟ್ ಮಾಡಿಕೊಳ್ಳಲೇಬೇಕಾದ ವಿಚಾರ. ಆದರೆ ಚಿತ್ರರಂಗದಲ್ಲಿ ಮಂಡ್ಯದ ಗಂಡಿನ ಗತ್ತು, ಗಾಂಭೀರ್ಯ ಇರೋ ಮತ್ತೊಬ್ಬ ನಟ ಯಾರು ಅನ್ನೋ ವಿಚಾರ ಟಾಕ್ ಆಫ್ ದ ಟೌನ್ ಆಗಿದೆ. ಸದ್ಯ ಡಿ ಬಾಸ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಹೆಸ್ರುಗಳು ಕೇಳಿ ಬರ್ತಿವೆ.

ಅಂಬರೀಶ್ ಚಿತ್ರರಂಗದ ಅಜಾತಶತ್ರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಡೀ ಚಿತ್ರರಂಗವನ್ನು ಸರಿದೂಗಿಸಿಕೊಂಡು ಹೋಗ್ತಿದ್ದ ಅಂಬರೀಶ್ ಮಾತನ್ನು ಲಕ್ಷ್ಮಣ ರೇಖೆಯಂತೆ ಎಲ್ಲಾರು ಭಾವಿಸುತ್ತಿದ್ದರು. ಇದೀಗ ಹಿರಿಯ ನಾಯಕನಿಲ್ಲದೆ ಚಿತ್ರರಂಗ ಬಡವಾಗಿಬಿಟ್ಟಿದೆ. ಅದರೆ ಮುಂದಾಳತ್ವ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ವಹಿಸ್ತಾರೆ ಅನ್ನೋದು ಓಪನ್ ಟಾಕ್.

ಇದರ ಹೊರತಾಗಿ, ಅಂಬರೀಶ್ ಗತ್ತು-ಗೈರತ್ತಿ ಇರೋ ಇಂದಿನ ಯಂಗ್ ಸ್ಟರ್ ಯಾರು ಅನ್ನೋದು ಎಲ್ಲರ ಕುತೂಹಲ. ದರ್ಶನ್, ಸುದೀಪ್, ಯಶ್, ಪುನೀತ್, ಉಪೇಂದ್ರ ಹೀಗೆ ಬಹುತೇಕ ಇಂದಿನ ಎಲ್ಲಾ ಸೂಪರ್ ಸ್ಟಾರ್​ಗಳ ಜೊತೆ ಅಂಬಿ ನಟಿಸಿದ್ದಾರೆ. ಉತ್ತಮ ಒಡನಾಟ ಕೂಡ ಹೊಂದಿದ್ರು. ಅಫ್ ಕೋರ್ಸ್​, ತಂದೆ ಸಮಾನರಾಗಿ ಇವ್ರೆಲ್ಲರ ಆಗುಹೋಗುಗಳಲ್ಲಿ ಅಂಬಿ ಪಾಲುದಾರರಾಗ್ತಿದರು.

ಸಿನಿಮೇತರವಾಗಿ ಕೂಡ ಖಡಕ್ ಮಾತಿನಿಂದ ಕನ್ನಡಿಗರ ಮನಗೆದ್ದಿರೋ ಸ್ಟಾರ್ ನಟರಂದ್ರೆ ಅದು ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅಂಬಿಗೆ ಬಲಭುಜ ಹಾಗೂ ಎಡಭುಜದಂತಿದ್ದ ಈ ಸ್ಟಾರ್ಸ್​, ಸ್ವಂತ ಮಕ್ಕಳಂತೆ ಒಡನಾಟ, ಬಾಂಧವ್ಯ ಹೊಂದಿದ್ರು. ಆದ್ರೀಗ ಅಂಬರೀಶ್ ರೆಬೆಲಿಸಂನ ವಾರಸ್ಧಾರತನ ದಚ್ಚು ಮೇಲೆ ವಾಲಿದೆ.

ಅಂಬರೀಶ್ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದದ್ದು ದಚ್ಚು ಅನ್ನೋ ಮಾಹಿತಿ ಎಲ್ಲಾ ಕಡೆ ಹರಿದಾಡ್ತಿದೆ. ಅಂಬಿಯ ಹಾಗುಹೋಗುಗಳಲ್ಲಿ ಹೆಚ್ಚು ಭಾಗಿಯಾಗ್ತಿದ್ದು ದರ್ಶನ್ ಅಂತೆ. ಅಷ್ಟೇ ಅಲ್ಲ, ಮಾತಿನ ಶೈಲಿ, ಮಾಧ್ಯಮದ ಜೊತೆಗಿನ ಸಂಬಂಧ ಹೀಗೆ ಎಲ್ಲವೂ ಹೆಚ್ಚೂ ಕಡಿಮೆ ಅಂಬಿಯನ್ನು ಹೋಲ್ತಾರೆ ದಚ್ಚು.

ಮಾತಿನಲ್ಲಿ ಒರಟ ಅನಿಸಿದರು, ಮನಸ್ಸು ಮಾತ್ರ ಬಂಗಾರ ಅನ್ನೋದನ್ನು ದರ್ಶನ್ ಸಾಕಷ್ಟು ಬಾರಿ ಪ್ರೂವ್ ಮಾಡಿದ್ದಾರೆ. ಹಾಗಾಗಿ ಅಂಬಿಯ ಆ ಗಾಂಭೀರ್ಯ, ಗತ್ತಿನ ಗಮ್ಮತ್ತು ದರ್ಶನ್​ರಲ್ಲಿ ಮಾತ್ರ ಕಾಣೋಕೆ ಸಾಧ್ಯ ಅನ್ನೋದು ಸದ್ಯದ ಟಾಕ್. ಇನ್ನು ದರ್ಶನ್ ಕೂಡ ಅಂಬಿ ಸಾವಿನ ಸುದ್ದಿ ತಿಳಿದಿದ್ದೇ, ಸ್ವಂತ ಮಗನಿಗಿಂತ ಹೆಚ್ಚಾಗಿ ಸ್ವೀಡನ್​ನಿಂದ ಎದ್ದುಬಿದ್ದು ಬಂದಿದ್ದು ಗೊತ್ತೇಯಿದೆ. ಅಷ್ಟೇ ಅಲ್ಲ, ಅಂತ್ಯಕ್ರಿಯ ಸೇರಿದಂತೆ ಅವರು ಅಂತಿಮ ಕರ್ಮಗಳಲ್ಲೂ ಭಾಗಿಯಾಗ್ತಿದ್ದಾರೆ. ಹಾಗಾಗಿ ದರ್ಶನ್​ರಲ್ಲಿ ಅಂಬಿ ರೆಬೆಲಿಸಂನ ಕಾಣಸಿಗಲಿದೆ.

Next Story

RELATED STORIES