Top

ಮದುವೆ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮದುವೆ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
X

ತಾಳಿಕಟ್ಟುವ ವೇಳೆ ವರ ಬದಲಾದ ಘಟನೆ ಸಕಲೇಶಪುರ ಪಟ್ಟಣದ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಬೈಕೆರೆ ಗ್ರಾಮದ ತಾರೇಶ್ ಹಾಗೂ ಬೇಲೂರು ತಾಲೂಕಿನ ಕುಪ್ಪಗೋಡು ನಿವಾಸಿಯಾದ ವಸಂತಗೌಡರ ಪುತ್ರಿ ಶೃತಿ ಯವರ ಮದುವೆ ನಡೆಸಲು ಗುರುಹಿರಿಯರು ನಿಶ್ಚಿಯಿಸಿದ್ದರು.ಇದರಂತೆ ಸಕಲ ಸಿದ್ದತೆ ಮಾಡಿಕೊಂಡಿದ್ದ ವಧುವರನ ಸಂಬಂಧಿಕರು ಕಲ್ಯಾಣ ಮಂಟಪಕ್ಕೆ ಆಗಮಿಸಿ ಶಾಸ್ತ್ರಗಳನ್ನು ನಡೆಸಿದ್ದರು.

ಶುಕ್ರವಾರ ಮಧುವೆ ಸಂಭ್ರಮದಲ್ಲಿದ್ದ ವರ ತಾರೇಶ್ ಮೊಬೈಲ್ಗೆ ಚಿತ್ರವೊಂದನ್ನು ಕಳುಹಿಸಿದ ಅನಾಮಿಕ ವ್ಯಕ್ತಿ, ಬೇಲೂರು ಪಟ್ಟಣದ ಖಾಸಗಿ ಅಂಗಡಿಯೊಂದರಲ್ಲಿ ಶೃತಿ ಈ ಹಿಂದೆ ಕೆಲಸ ಮಾಡುತ್ತಿದ್ದು ಆ ಅಂಗಡಿ ಮಾಲೀಕನೊಂದಿಗೆ ಈಕೆಗೆ ಸಂಬಂದವಿದೆ ಎಂದು ತಿಳಿಸಿದ್ದ. ಈ ವಿಚಾರವನ್ನು ತನ್ನ ಸಂಬಂದಿಕರಿಗೆ ತಿಳಿಸಿದ ತಾರೇಶ್ ಈ ಹುಡುಗಿಯನ್ನು ಮದುವೆಯಾಗುವುದಿಲ್ಲ ಎಂದು ಪಟ್ಟುಹಿಡಿದಿದ್ದ. ಈ ವೇಳೆ ಎರಡು ಕಡೆಯ ಸಂಬಂದಿಕರ ನಡುವೆ ಮಾತುಕತೆ ಜಗಳ ಕ್ಕೆ ತಿರುಗಿತ್ತು. ಕೊನೆಗೆ ತಾರೆಶ್ ಯಾವುದೇ ಕಾರಣಕ್ಕೂ ಮದುವೆ ಆಗಲ್ಲ ಎಂದಾಗ ಅಂಗಡಿ ಮಾಲೀಕ ಅಭಿಲಾಷ್ ಕರೆಸಿ ಮಾತನಾಡಿಸಿದರು. ಆಗ ನನ್ನಿಂದ ಮದುವೆ ಮುರಿದು ಬಿದ್ದಿವೆ ನಾನೇ ಮದುವೆ ಆಗುತ್ತೇನೆ ಎಂದು ಅಭಿಲಾಶ್ ಮುಂದೆ ಬಂದಿದ್ದಾನೆ.. ಇದರಿಂದ ಮುರಿದು ಬಿದಿದ್ದ ಮದುವೆಗೆ ಮರು ಜೀವ ಸಿಕ್ಕಂತಾಗಿದೆ.

ಇನ್ನೂ ಮದುವೆಯನ್ನು ವಧು ಶೃತಿ ಹಾಗೂ ಆಕೆಯ ಪ್ರಿಯಕರ ಅಭಿಲಾಷ್, ಪೂರ್ವನಿಯೋಜಿತವಾಗಿ ಮಾಡಿದ್ದಾರೆ ಎಂದು ವರ ತಾರೇಶ್ ಮನೆಯವರು ದೂರಿದರು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನವ ದಂಪತಿಗಳು, ಯುವತಿ ಬಾಳು ಹಾಳಾಗಬಾರದೆಂಬ ಕಾರಣಕ್ಕೆ ಯುವತಿ ಕೈ ಹಿಡಿದಿದ್ದೇನೆ.

ನಾನು ಎಂದೂ ಶೃತಿಯನ್ನು ಪ್ರೀತಿಸಿರಲಿಲ್ಲ. ನಾನು ಪ್ರೀತಿಸಿದ್ದರೆ ಹೀಗೆ ಮಾರ್ಯಾದೇ ಹೋಗುವ ಕೆಲಸ ಮಾಡುತ್ತಿರಲಿಲ್ಲ.ಯಾರೋ ಮೂರನೇ ವ್ಯಕ್ತಿ ತಾರೇಶ್ ಮೊಬೈಲ್ಗೆ ಪೋಟೋ ಕಳಿಸಿ ಅವಾಂತರ ಸೃಷ್ಟಿಸಿದ್ದಾರೆ ಎಂದಿದ್ದಾನೆ.

ತಾರೇಶ್ ತನ್ನನ್ನ ಪ್ರೀತಿಸಿ ನಂತರ ಮದುವೆ ಮಂಟಪದಲ್ಲಿ ಮೋಸ ಮಾಡಿ ಕೈ ಬಿಟ್ಟಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶೃತಿ, ನಾನು ಮತ್ತು ತಾರೇಶ್ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡಿತ್ತಿದ್ದೋ... ತಾರೇಶ್ ಬೇರೆ ಹುಡುಗಿ ಪ್ರೀತಿ ಮಾಡುತ್ತಿದ್ದ ಅನಿಸುತ್ತೆ.. ಹಾಗಾಗಿ ತಾರೇಶ್ ಗೆ ಬಹುಶಃ ಮದುವೆ ನಿಲ್ಲಿಸೊ ಉದ್ದೇಶ ಇದ್ದಕಾರಣವೇ ನಿನ್ನೆ ಮದುವೆ ಮನೆಗೆ ಬರಲಿಲ್ಲ ಎಂದು ಕಿಡಿ ಕಾರಿದ್ದಾರೆ... ಅಲ್ಲದೆ ತಾರೇಶ್ ಇದ್ದ ಅನುಮಾನವೇ ಮದುವೆ ಮುರಿದು ಬೀಳಲು ಕಾರಣ ಎಂದಿರುವ ಶೃತಿ, ನಾವು ಚನ್ನಾಗಿ ಇರ್ತೀವಿ ಯಾರೋ ತೊಂದರೆ ಕೊಡದಿದ್ದರೆ ಸಾಕು ಎಂದಿದ್ದಾಳೆ.

ಅಭಿಲಾಷ್ ಇನ್ಯಶ್ಯೂರೆನ್ಸ್ ಕಂಪನಿ ಒಂದನ್ನು ನಡೆಸುತ್ತಿದ್ದು, ಶೃತಿ ಕಳೆದ ಒಂದೂವರೆ ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.. ಆ ಸಮಯದಲ್ಲಿ ಅಭಿಲಾಷ್ ನೋಂದಿಗೆ ಕೆಲ ಫೋಟೋ ಗಳನ್ನು ತೆಗೆದಿದ್ದಳು.. ಆ ಫೋಟೋಗಳ ನೋಡಿ ತಾರೇಶ್ ಮದುವೆ ನಿರಾಕರಿಸಿದ್ದಾನೆ.. ಅಲ್ಲದೆ ಅರ್ಮಿಯಲ್ಲಿ ಕೆಲಸಮಾಡುವ ತಾರೇಶ್, ಶೃತಿ ಮೂರು ವರ್ಷಗಳಿಂದ ನನ್ನ ಪ್ರೀತಿ ಮಾಡುವ ನಾಟ್ಕ ಮಾಡಿ ನನಗೆ ಮೋಸ ಮಾಡಿದ್ದಾನೆ, ನನ್ನೊಂದಿಗೆ ಮದುವೆ ನಿಶ್ಚಯ ಆಗಿದ್ರೂ ಅಭಿಲಾಷ್ ಜೊತೆ ಸುತ್ತಾಡಿ ದ್ದಾಳೆ.. ಈ ವಿಷಯ ತಿಳಿದು ನಾನು ಈ ಕಠಿಣ ನಿರ್ಧಾರ ಮಾಡಿದೆ.

ಮದುವೆಗೆ ಐದು ಲಕ್ಷ ಖರ್ಚೂ ಮಾಡಿ ನಾನೇ ಯಾಕೆ ಮದುವೆ ನಿಲ್ಲಿಸಲಿ ಎಂದಿದ್ದಾನೆ. ಅಲ್ಲದೇ ಶೃತಿ ತೆಗೆದ ಫೋಟೋ ಮೂರನೇ ವ್ಯಕ್ತಿಗೆ ಹೇಗೆ ಹೋಗಿದೆ. ಇವರಿಬ್ಬರೂ ಫ್ರೀ ಪ್ಲಾನ್ ಮಾಡಿ ಮದುವೆಯನ್ನು ನಿಲ್ಲಿಸಲು ನನ್ನ ಮೊಬೈಲ್ ಗೆ ಫೋಟೋ ಕಳಿಸಿದ್ದಾರೆ ಎಂದು ಆರೋಪ ಮಾಡಿದ್ದಾನೆ. ಒಟ್ಟಾರೆ ವರ ಕೈ ಕೊಟ್ಟು ಮದುವೆ ಮುರಿದು ಬಿದ್ದಿದ್ರೂ, ಮತ್ತೊಬ್ಬ ವಧುವನ್ನು ಕೈ ಹಿಡಿದು ಪ್ರಕರಣ ಸುಖಾಂತ್ಯ ಕಂಡಿದೆ.

Next Story

RELATED STORIES