Top

ತಮ್ಮ ಹೆಲಿಕಾಪ್ಟರ್‌ನಲ್ಲಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ದ ರಾಜ್ಯಪಾಲರು..!

ತಮ್ಮ ಹೆಲಿಕಾಪ್ಟರ್‌ನಲ್ಲಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ದ ರಾಜ್ಯಪಾಲರು..!
X

ಇಟಾನಗರ: ಅರುಣಾಚಲಪ್ರದೇಶದ ರಾಜ್ಯಪಾಲ ಬಿ.ಡಿ.ಮಿಶ್ರಾ ಗರ್ಭಿಣಿಯೊಬ್ಬಳನ್ನು ತಮ್ಮ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತವಾಂಗ್‌ನಿಂದ ಆಸ್ಪತ್ರೆಗೆ ತಲುಪುವಲ್ಲಿ ರಾಜ್ಯಪಾಲ ಬಿ.ಡಿ.ಮಿಶ್ರಾ ಗರ್ಭಿಣಿ ಮತ್ತು ಆಕೆಯ ಪತಿಗೆ ಸಹಾಯ ಮಾಡಿದ್ದು, ತಮ್ಮ ಹೆಲಿಕಾಪ್ಟರ್‌ನಲ್ಲಿ ಗರ್ಭಿಣಿಗೆ ಆಸ್ಪತ್ರೆಗೆ ಕಳುಹಿಸಿದ್ದು, ತಾವು ಬೇರೆ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ. ಅಲ್ಲದೇ ಹೆಲಿಕಾಪ್ಟರ್‌ನಿಂದ ಇಳಿದ ತಕ್ಷಣ, ಇಟಾನಗರ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಯಿತು.

ತವಾಂಗ್‌ನಿಂದ ಇಟಾನಗರಕ್ಕೆ ತೆರಳಲು ಬರೋಬ್ಬರಿ 15ಗಂಟೆಗಳ ಕಾಲಾವಕಾಶಬೇಕು. ಆದರೆ ವಿಮಾನ, ಹೆಲಿಕಾಪ್ಟರ್‌ ಮೂಲಕ ಹೋಗುವುದಾದರೆ, ಕೇವಲ 2 ಗಂಟೆಯಲ್ಲಿ ಇಟಾನಗರ ತಲುಪಬಹುದು.

ಈ ಕಾರಣಕ್ಕಾಗಿ, ಈ ಬಗ್ಗೆ ರಾಜ್ಯಪಾಲರು, ಸಿಎಂ ಮತ್ತು ಸ್ಥಳೀಯ ರಾಜಕೀಯ ಮುಖಂಡರೊಂದಿಗೆ ಮಾತುಕತೆ ನಡೆಸಿದ ರಾಜ್ಯಪಾಲ ಬಿ.ಡಿ.ಮಿಶ್ರಾ, ಇನ್ನೆರಡು ದಿನ ವಿಮಾನಯಾನ ವ್ಯವಸ್ಥೆ ಸ್ಥಗಿತಗೊಂಡ ಕಾರಣ, ತಮ್ಮ ಹೆಲಿಕಾಪ್ಟರ್‌ನ್ನ ನೀಡುವ ಮೂಲಕ ಗರ್ಭಿಣಿಗೆ ಸಹಾಯ ಮಾಡಿದ್ದಾರೆ.

ಇಟಾನಗರದ ಹಿಮಾ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆಯಾಗಿದ್ದು, ರಾಜ್ಯಪಾಲ ಬಿ.ಡಿ.ಮಿಶ್ರಾ ತಾಯಿ-ಮಗುವಿಗೆ ಶುಭಾಶಯ ಕೋರಿದ್ದಾರೆ.

Next Story

RELATED STORIES