ಪೆಟ್ರೋಲ್ ದರ ವರ್ಷದಲ್ಲೇ ಕನಿಷ್ಠ ಮೊತ್ತಕ್ಕೆ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಡಾಲರ್ ವಿರುದ್ಧ ರೂಪಾಯಿ ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಒಂದೇ ದಿನ 50 ಪೈಸೆಯಷ್ಟು ಇಳಿಕೆಯಾಗಿದೆ.
ಬೆಂಗಳೂರಿನಲ್ಲೂ 50 ಪೈಸೆ ಇಳಿಕೆಯಾಗಿರುವ ಪೆಟ್ರೋಲ್ 74.24 ರೂ.ಗೆ ಸಿಗುತ್ತೀದೆ. ಇನ್ನೂ, 84 ರು.ವರೆಗೆ ತಲುಪಿದ್ದ ಡೀಸೆಲ್ ಕೂಡ ಬುಧವಾರ 40 ಪೈಸೆಯಷ್ಟು ಇಳಿಕೆಯಾಗಿದ್ದು, ದೆಹಲಿಯಲ್ಲಿ 68.89 ರು.ಗೆ ಲಭ್ಯವಾಗುತ್ತಿದೆ. ಬೆಂಗಳೂರಿನಲ್ಲಿ 68.93 ರೂ.ಗೆ ಸಿಗುತ್ತಾದೆ.
ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ದುರ್ಬಲ ಹಿನ್ನೆಲೆಯಲ್ಲಿ ಅ.4ರಂದು ಪೆಟ್ರೋಲ್, ಡೀಸೆಲ್ ದರ ಐತಿಹಾಸಿಕ ಮಟ್ಟ ತಲುಪಿದ್ದವು. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 84 ಹಾಗೂ ಮುಂಬೈನಲ್ಲಿ 91.34 ರೂ.ಗೆ ಏರಿಕೆಯಾಗಿತ್ತು. ಡೀಸೆಲ್ ಬೆಲೆ ದೆಹಲಿ, ಮುಂಬೈನಲ್ಲಿ ಕ್ರಮವಾಗಿ ಸಾರ್ವಕಾಲಿಕ ದಾಖಲೆಯ 75.45 ಹಾಗೂ 80.10 ರು.ಗೆ ಏರಿದ್ದವು. ಬುಧವಾರ ಮುಂಬೈನಲ್ಲಿ ಪೆಟ್ರೋಲ್ ದರ 79.12 ಹಾಗೂ ಡೀಸೆಲ್ 71.91 ರೂ.ಗೆ ತಗ್ಗಿದೆ.
ಪೆಟ್ರೋಲ್ ಬೆಲೆ ಇಳಿಕೆಗೆ ಕಾರಣವಾಗಿರುವುದು ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಯಲ್ಲಿ ಆಗುತ್ತಿರುವ ಗಣನೀಯ ಇಳಿಕೆ. ಪ್ರಮುಖ ತೈಲ ಮಾರುಕಟ್ಟೆಯಾದ ಬ್ರೆಂಟ್ ಕ್ರೂಡ್ನಲ್ಲಿ ಬ್ಯಾರೆಲ್ ತೈಲವು 59.23 ಡಾಲರ್ಗೆ ಇಳಿಕೆಯಾಗಿದೆ. ಹಾಗೆಯೇ ಡಬ್ಲ್ಯೂಟಿಐ ಕ್ರೂಡ್ನಲ್ಲಿನ ಬ್ಯಾರೆಲ್ ತೈಲವು 50.53 ಡಾಲರ್ ಆಗಿದೆ.
ಮುಂದಿನ ಕೆಲ ದಿನಗಳವರೆಗೆ ಈ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಸಂಭವವಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇನ್ನಷ್ಟು ಇಳಿಯುವ ಸಾಧ್ಯತೆ ಇದೆ.