Top

ಹವಾಲ ಹಣ ವರ್ಗಾವಣೆ ಮಾಡುತ್ತೀದ್ದ ಇಬ್ಬರ ಬಂಧನ

ಹವಾಲ ಹಣ ವರ್ಗಾವಣೆ ಮಾಡುತ್ತೀದ್ದ ಇಬ್ಬರ ಬಂಧನ
X

ಬೆಂಗಳೂರಿನಿಂದ ಊಟಿಗೆ ಹವಾಲ ಹಣ ಸಾಗಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಸಿಸಿಬಿ ಪೊಲೀಸರು ಎಸಿಪಿ ಪಿ ಟಿ ಸುಬ್ರಮಣಿ ನೇತೃತ್ವದಲ್ಲಿ ದಾಳಿ ನಡೆಸಿ 75 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಸಜ್ಜನ್ ರಾವ್ ಸರ್ಕಲ್ ಬಳಿಯ ಖಾಸಗಿ ಹೋಟೆಲ್​ನಲ್ಲಿ ಹವಾಲ ದಂಧೆ ನಡೆಸುತ್ತೀದ್ದ ಹೈದರಾಬಾದ್ ಮೂಲದ ವ್ಯಕ್ತಿಗಳು ಊಟಿಗೆ ಹಣ ವರ್ಗಾವಣೆ ಮಾಡುತ್ತೀದ್ದರು ಈ ವೇಳೆ ಮುಜಾಹೀದ್ ಮತ್ತು ನಾಸೀರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಊಟಿ ಮೂಲದ ಮಧ್ಯವರ್ತಿ ನಂದೀಶ್ ಎಂಬುವರಿಗೆ ಹಣ ವರ್ಗಾಯಿಸುತ್ತಿದ್ದರು, ಈ ವೇಳೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.ಇದೇ ಸಂದರ್ಭದಲ್ಲಿ 75 ಲಕ್ಷ ಹವಾಲ ಹಣ ಮತ್ತು ಒಂದು ಐಷರಾಮಿ ಕಾರು ಪತ್ತೆ ಮಾಡಲಾಗಿದೆ.

ಇನ್ನೂ 75 ಲಕ್ಷ ಹಣ ಊಟಿಗೆ ಹೊರಟಿತ್ತು ರಾಜ್ಯದ ದೊಡ್ಡ ಉದ್ಯಮಿಯೊಬ್ಬರ ಪ್ರಾಪರ್ಟಿ ಖರೀದಿಗೆ ಹಣ ಸಾಗಿಸುತ್ತೀದ್ದರು ಎಂದು ತಿಳಿದು ಬಂದಿದೆ. ಪ್ರಾಪರ್ಟಿ ಖರೀದಿಗೆ ಮುಂದಾಗಿದ್ದ ಹೈದರಾಬಾದ್ ಮೂಲದ ವ್ಯಕ್ತಿ, ನಾಳೆ ಊಟಿಯಲ್ಲಿ ಪ್ರಾಪರ್ಟಿ ನೋಂದಣಿ ಕಾರ್ಯವಿತ್ತು ಅದಕ್ಕಾಗಿ ಇಂದು ಹಣ ಕೊಂಡೊಯ್ಯಲು ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಇನ್ನೂ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದ್ದು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತೀದೆ.

Next Story

RELATED STORIES