Top

TV5 ಮೇಲೆ FIR ದಾಖಲಿಸಿದ ಕುಮಾರಸ್ವಾಮಿ ಸರಕಾರ

TV5 ಮೇಲೆ FIR ದಾಖಲಿಸಿದ ಕುಮಾರಸ್ವಾಮಿ ಸರಕಾರ
X

ಮಾಧ್ಯಮಗಳ ಮೇಲೆ ಗರಂ ಆಗಿದ್ದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಇದೀಗ ತಮ್ಮ ವಿರುದ್ಧ ಸುದ್ದಿ ಪ್ರಕಟಿಸಿದ್ದಕ್ಕಾಗಿ ಸುದ್ದಿಗೆ ಸಂಬಂಧ ಇಲ್ಲದ ಸೆಕ್ಷನ್ ಅಡಿಯಲ್ಲಿ ಟಿವಿ5 ಸುದ್ದಿ ವಾಹಿನಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಅನಾರೋಗ್ಯಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ನೀಡಲಾಗುತ್ತದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಟಿವಿ5 ವರದಿ ಮಾಡಿತ್ತು.

ಟಿವಿ 5 ವರದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಎಚ್.ಡಿ. ಕುಮಾರಸ್ವಾಮಿ ರಾತ್ರಿಯೇ ಟ್ವೀಟ್ ಮಾಡಿ ಇದೊಂದು ಸುಳ್ಳು ವರದಿ. ಇಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ವಿಷಯ ಅಲ್ಲಿಗೆ ಮುಗಿಯಬಹುದಿತ್ತು. ಆದರೆ ಗುರುವಾರ ಬೆಳಗ್ಗೆ ಏಕಾಏಕಿ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ಶೇಷಾದ್ರಿಪುರ ಕಚೇರಿ ಬಳಿ ಆಗಮಿಸಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಸರಕಾರ ಸಾರ್ವಜನಿಕ ಶಾಂತಿಗೆ ಭಂಗಕ್ಕಾಗಿ ಸೆಕ್ಷನ್ 120b ಅನ್ವಯ ಪ್ರಕರಣ ದಾಖಲಿಸಿದೆ. ಮುಖ್ಯಮಂತ್ರಿ ಸ್ಥಾನ ಪಲ್ಲಟ ಸುದ್ದಿ ಪ್ರಸಾರಕ್ಕೂ ಶಾಂತಿ ಭಂಗಕ್ಕೂ ಯಾವ ಸಂಬಂಧ ಇದೆ ಎಂಬುದು ವ್ಯತ್ಯಾಸ ತಿಳಿಯದೇ ಪ್ರಕರಣ ದಾಖಲಿಸಲಾಗಿದೆ.

Next Story

RELATED STORIES