ಭರ್ಜರಿ ಬ್ಯಾಟಿಂಗ್ ಅಭ್ಯಾಸ ಮಾಡಿದ ಕೊಹ್ಲಿ ಬಾಯ್ಸ್​

ಕರ್ನಾಟಕದ ಕೆ.ಎಲ್. ರಾಹುಲ್ ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ಐವರು ಬ್ಯಾಟ್ಸ್​​ಮನ್ ಗಳು ಅರ್ಧಶತಕ ಸಿಡಿಸಿ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸಿ ಉತ್ತಮ ಮೊತ್ತ ದಾಖಲಿಸಲು ನೆರವಾದರು.

ಸಿಡ್ನಿಯಲ್ಲಿ ನಡೆದ ಪಂದ್ಯದ ಎರಡನೇ ದಿನವಾದ ಗುರುವಾರ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್​ನಲ್ಲಿ 358 ರನ್​ಗಳಿಗೆ ಆಲೌಟಾಯಿತು. ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ಇಲೆವೆನ್ ತಂಡ ವಿಕೆಟ್ ನಷ್ಟವಿಲ್ಲದೇ 24 ರನ್ ಕಲೆಹಾಕಿದೆ. ಮೊದಲ ದಿನ ಮಳೆಯಿಂದಾಗಿ ಸಂಪೂರ್ಣವಾಗಿ ರದ್ದುಗೊಂಡಿತ್ತು.

ಇನಿಂಗ್ಸ್ ಆರಂಭಿಸಿದ ಭಾರತ ತಂಡ ಕೆ.ಎಲ್​.ರಾಹುಲ್ (3) ಅವರನ್ನು ಆರಂಭದಲ್ಲೇ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಪೃಥ್ವಿ ಶಾ (66), ಚೇತೇಶ್ವರ್ ಪೂಜಾರ (53), ನಾಯಕ ವಿರಾಟ್ ಕೊಹ್ಲಿ (64), ಅಜಿಂಕ್ಯ ರಹಾನೆ (56) ಮತ್ತು ಹನುಮ ವಿಹಾರಿ (53) ಅರ್ಧಶತಕಗಳನ್ನು ಬಾರಿಸಿ ಭರ್ಜರಿಯಾಗಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ರೋಹಿತ್ ಶರ್ಮ (40) ಉತ್ತಮ ಪ್ರದರ್ಶನ ನೀಡಿದರು.

ಆಸ್ಟ್ರೇಲಿಯಾ ಪರ ಏರಾನ್ ಹಾರ್ಡಿ 4 ವಿಕೆಟ್ ಪಡೆದು ಮಿಂಚಿದರು. ಉಳಿದೆಲ್ಲಾ ಬೌಲರ್​ಗಳು ತಲಾ 1 ವಿಕೆಟ್ ಗಳಿಸಿ ಭಾರತ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಡಿಸೆಂಬರ್ 6ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಭಾರತೀಯ ಆಟಗಾರರಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ.

  • ಸಂಕ್ಷಿಪ್ತ ಸ್ಕೋರ್
  • ಭಾರತ ಮೊದಲ ಇನಿಂಗ್ಸ್ 92 ಓವರ್ 358 (ಪೃಥ್ವಿ 66, ಕೊಹ್ಲಿ 64, ರಹಾನೆ ಗಾಯಗೊಂಡು ನಿವೃತ್ತಿ 56, ಪೂಜಾರ 53, ಹನುಮ 53, ಹಾರ್ಡಿ 50/4)
  • ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 4 ಓವರ್ ವಿಕೆಟ್ ನಷ್ಟವಿಲ್ಲದೇ 24.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.