Top

ಬಡವರಿಗೆ ಸಿಕ್ಕಿಲ್ಲಾ ಅಂಬರೀಶ್ ಸೂರು

ಬಡವರಿಗೆ ಸಿಕ್ಕಿಲ್ಲಾ ಅಂಬರೀಶ್ ಸೂರು
X

ಐದು ವರ್ಷ ಹಿಂದೆ ಅಂಬರೀಶ್ ಕುಂದಾನಗರಿಯ ಗುಡಿಸಲುಗಳಿಗೆ ಭೇಟಿ ನೀಡಿದಾಗ ಅವರ ಜೀವ ಮರಗಿತ್ತು. ತಕ್ಷಣವೇ ಸ್ಲಂ ನಿವಾಸಿಗಳಿಗೆ ಜಿ ಪ್ಲಸ್ ಮಾದರಿಯ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಈವರೆಗೂ ಗುಡಿಸಲಿನಲ್ಲಿರುವ ಕುಟುಂಬಗಳಿಗೆ ಅಂಬಿ ಕನಸ್ಸಿನ ಸೂರುಗಳು ಸಿಕ್ಕಿಲ್ಲಾ.

ಜನನಾಯಕ ಅಂಬರೀಶ್​ನನ್ನು ಕಳೆದುಕೊಂಡು ಇಡೀ ಕರುನಾಡೆ ಮರಗುತ್ತಿದೆ. ಅಂಬಯನ್ನೆ ನೆನಸಿ ಕುಂದಾನಗರಿ ಬೆಳಗಾವಿಯ ಗುಡಿಸಲು ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂಬರೀಶ್ ವಸತಿ ಸಚಿವರಾಗಿದ್ದರು.ಆಗ ಬೆಳಗಾವಿಯ ಚಳಿಗಾಲ ಅಧಿವೇಶನಕ್ಕೆ ಬಂದಾಗ ಅಂದಿನ ಡಿಸಿ ಜಯರಾಮ್ ಅವರ ಮನವಿ ಮೇರೆಗೆ ಶ್ರೀನಗರ ಸ್ಲಂಗಳಿಗೆ ಭೇಟಿ ಕೊಟ್ಟಿದ್ದರು.

ಗುಡಿಸಲಿನಲ್ಲಿ ವಾಸವಾಗಿದ್ದ ಕುಟುಂಬಗಳ ಸಂಕಷ್ಟ ನೋಡಿ ಅವರ ಜೀವ ಮರಗಿ ಹೋಗಿತ್ತು. ತಕ್ಷಣವೇ ಜಿ ಪ್ಲಸ್ ಮಾದರಿಯ ಮನೆಗಳನ್ನು ಮಂಜೂರು ಮಾಡಿದರು. ಅಲ್ಲದೇ ತಕ್ಷವೇ ಮನೆಗಳ ನಿರ್ಮಾಣದ ಕಾರ್ಯಕ್ಕೂ ಚಾಲನೆ ಸಹ ಕೊಟ್ಟಿದ್ದರು. ಈಗ ಆ ಮನೆಗಳು ಪೂರ್ಣಗೊಂಡಿದೆ. ಇಂದು ಬಡವರಿಗಾಗಿ ಸೂರು ಕಟ್ಟಿಸಿದ್ದ ನಾಯಕ ನಮ್ಮೊಂದಿಗಿಲ್ಲಾ.ಆದರೆ ಅಂಬರೀಶ್ ಮಂಜೂರು ಮಾಡಿದ ಮನೆಗಳು ಇನ್ನು ಆ ಬಡ ಕುಟುಂಬಗಳ ಕೈ ಸೇರಿಲ್ಲಾ.

ಈಗಾಗಲೇ ಬೆಳಗಾವಿಯ ಶ್ರೀನಗರದಲ್ಲಿ ಜಿ ಪ್ಲಸ್ ಮಾದರಿ ಮನೆಗಳನ್ನ ಸ್ಲಂ ಬೋರ್ಡನಿಂದ ನಿರ್ಮಿಸಲಾಗಿದೆ. ಕಳೆದ ಐದು ವರ್ಷದಿಂದ ನೂರಾರು ಬಡ ಕುಟುಂಬಗಳು ಸೂರಿನ ನಿರೀಕ್ಷೆಯಲ್ಲಿದ್ದಾರೆ. ಸ್ಥಳೀಯ ರಾಜಕೀಯ ಕಿತ್ತಾಟದಿಂದ ಮತ್ತು ಅಧಿಕಾರಿಗಳ ನಿರ್ಲಕ್ಷತನಿಂದ ಅಂಬರೀಶ್ ಕನಸ್ಸಿನ ಮನೆಗಳು ಬಡವರಿಗೆ ಇನ್ನೂ ವರದಾನವಾಗಿಲ್ಲ. ಹಾಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತು ಮಾಜಿ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಮಧ್ಯೆದ ಗುದ್ದಾಟದಿಂದ ಬಡವರಿಗೆ ಮನೆಗಳ ಹಂಚಿಕೆ ವಿಳಂಬವಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

Next Story

RELATED STORIES