ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ '2.0' ಸಿನಿಮಾ?

ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿರುವ ರಜನಿಕಾಂತ್ ನಟನೆಯ 2.0 ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು. ಇಂದು ಪ್ರಪ್ರಂಚದಾದ್ಯಂತ ತೆರೆಗೆ ಅಪ್ಪಳಿಸಿದೆ.
ಎಸ್ ಶಂಕರ್ ನಿರ್ದೇಶನದ 2.0 ಸಿನಿಮಾ ಕುತೂಹಲ ಹುಟ್ಟುಹಾಕಿದ್ದು ರಜನಿ ಅಭಿಮಾನಿ ಸೆಲೆಬ್ರೇಷನ್ಗೋಸ್ಕರ ಕಾಯ್ತಾ ಇದ್ದಾರು. ಆದರೆ ಈ ಬಾರಿ ರೆಬಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ 2.0 ಸೆಲೆಬ್ರೇಷನ್ ಅಷ್ಟಾಗಿ ಇರುವುದಿಲ್ಲ ಎನ್ನಲಾಗಿದೆ.
ವರ್ಲ್ಡ್ ವೈಡ್ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಲೈಕಾ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳು 120 ಕೋಟಿಗೆ ಸೇಲ್ ಆಗಿವೆ.
ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಮೊದಲಾದವರು ನಟಿಸಿರುವ ‘2.0’ ಚಿತ್ರ ಇಂದು ತೆರೆಗೆ ಬಂದಿದೆ. ಮೊದಲ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 900ಕ್ಕೂ ಅಧಿಕ ಪ್ರದರ್ಶನ ಕಾಣುತ್ತಿದೆ. ಮುಂಜಾನೆ 4 ಗಂಟೆಯಿಂದಲೇ ಸಿನಿಮಾ ಶೋಗಳು ಆರಂಭಗೊಂಡಿದ್ದವು.
ಈಗಾಗಲೇ ಬಹುತೇಕ ಶೋಗಳ ಟಿಕೆಟ್ ಸೋಲ್ಡ್ಔಟ್ ಆಗಿದೆ. ಚಿತ್ರಮಂದಿರದಿಂದ ಹೊರಬರುತ್ತಿದ್ದಂತೆ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.