ಕೆಸರಲ್ಲಿ ಸಿಲುಕಿದ್ದ ಆನೆ ರಕ್ಷಣೆ! ಮರಿ ಆನೆ ಸಂಕಟಕ್ಕೆ ತೆರೆ

ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಾಲ್ಕೈದು ದಿನಗಳಿಂದ ನರಳುತ್ತಿದ್ದ ಕಾಡನೆಯನ್ನು ಸ್ಥಳೀಯರ ನೆರವಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿ ಆನೆಯ ನರಳಾಟ ನೋಡಿ ಮರಿ ಆನೆ ಪಡುತ್ತಿದ್ದ ಸಂಕಟ ತೀರಿದಂತಾಗಿದೆ.

ಇದು ಅಮ್ಮನ ಎದರು ಬಂದು ರೋಧಿಸುತ್ತಿರುವ ಪುಟ್ಟ ಆನೆಯೊಂದರ ಕಥೆ. ನೀರು ಕುಡಿಯಲು ಬಂದಿದ್ದ ತಾಯಿ ಆನೆ ಹಾಗೂ ಮರಿಯಾನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಡದರವಳ್ಳಿಯಲ್ಲಿ ಕೆಸರಿನಲ್ಲಿ ಸಿಲುಕಿ ಕೊಂಡಿರುವ ಆನೆಗಳ ಕಥೇ ಇದು.

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದೆ. ಆಹಾರ ನೀರು ಅರಸಿ ಕಾಡಿನಿಂದ ನಾಡಿಗೆ ನುಗ್ಗುತ್ತಿವೆ ಕಾಡನೆಗಳು. ಅಂದು ಶನಿವಾರ ಬೆಳಿಗ್ಗೆ ನೀರು ಕುಡಿಯಲು ಬಂದ ತಾಯಿ ಆನೆ ಹಾಗೂ ಮರಿಯಾನೆ ಕೆಸರಿನಲ್ಲಿ ಸಿಲುಕಿಕೊಂಡು ಬಿಟ್ಟಿತ್ತು. ತಕ್ಷಣ ಮರಿಯಾನೆ ಕೆಸರಿನಿಂದ ಪಾರಾಗುವಲ್ಲಿ ಯಶಸ್ವಿಯಾಗುತ್ತೆ. ಆದರೆ ತಾಯಿ ಆನೆ ಮಾತ್ರ ಹೊರಬರಲಾಗದೇ ಕೆಸರಲ್ಲಿ ಸಿಲುಕಿಕೊಂಡು ಬಿಟ್ಟಿತ್ತು.

ಕೆಸರಿನಲ್ಲಿ ಸಿಲುಕಿ ಕೊಂಡ ತಾಯಿ ಆನೆಯನ್ನು ಹೇಗಾದರೂ ಅಲ್ಲಿಂದ ಪಾರುಮಾಡಲು ಮರಿಯಾನೆ ಬಿಟ್ಟು ಬಿಡದೇ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇತ್ತು. ಅದು ಒಂದಲ್ಲ, ಎರಡಲ್ಲ, ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಲೇ ಇತ್ತು. ಇದರ ಮಧ್ಯೆ ಕಾಡಿಗೆ ಹೋಗಿ ತಾನೇ ಸೊಪ್ಪು ತಂದು ಅಮ್ಮನಿಗೆ ಕೊಡುತ್ತಿತ್ತು.

ತಾಯಿ ಆನೆ ಮಾತ್ರ ನಾಲ್ಕು ದಿನದಿಂದ ಆಹಾರವಿಲ್ಲದೇ, ಕೂಗುವುದಕ್ಕೆ ಆಗುವುದೇ ಅಲ್ಲಿಂದ ಏಳುವುದಕ್ಕೂ ಆಗದೇ ಪಡಬಾರದ ಕಷ್ಟ ಅನುಭವಿಸುತ್ತಿತ್ತು. ಅದೃಷ್ಟ ವಾಶತ್ ಮರಿಯಾನೆ ಕಾಡಿನಿಂದ ದಾರಿಗೆ, ದಾರಿಯಿಂದ ತಾಯಿ ಆನೆ ಬಳಿ ಓಡಾಡುತ್ತಿದ್ದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ಆನೆ ಪರದಾಟ ಕಂಡು ಬಂದಿತು.

ತಕ್ಷಣ ಕಡದರವಳ್ಳಿಯ ಸುತ್ತ ಮುತ್ತಲಿನ ಜನರು ದೌಡಯಿಸಿ ಆನೆ ರಕ್ಷಣೆ ಮಾಡಲು ಹರಸಾಹಸಪಟ್ಟರೂ ಆನೆ ಹೊರತೆಗೆಯಲು ಸಾಧ್ಯವಾಗಲಿಲ್ಲ. ಸ್ಥಳೀಯರು ನಂತರ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.

ಸಕಲೇಶಪುರ ಎಸಿಎಫ್ ನಾಗರಾಜ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಅರಣ್ಯಧಿಕಾರಿಗಳು ಎರಡು ಸಾಕಾನೇ ಜೊತೆಗೆ ವೈದ್ಯರನ್ನು ಕರೆತಂದು ಕಾರ್ಯಾಚರಣೆ ಆರಂಭಿಸಿದರು.

ನಿತ್ರಾಣಗೊಂಡಿದ್ದ ಆನೆಯನ್ನು ಸ್ಥಳದಿಂದ ಸಾಕನೇ ಸಹಾಯದಿಂದ ಜೋತೆಗೆ ಜೆಸಿಬಿಯಿಂದ ಆನೆಯನ್ನು ತಕ್ಷಣ ವೈದ್ಯರು ಕಾಡನೆಗೆ ಚಿಕಿತ್ಸೆ ಕೊಟ್ಟು ಚೇತರಿಸಿಕೊಳ್ಳುವಂತೆ ಮಾಡಿದರು. ಇಷ್ಟೆಲ್ಲಾ ಆದರೂ ಮರಿ ಆನೆ ಮಾತ್ರ ತಾಯಿಯನ್ನು ಬಿಟ್ಟು ಕದಲೇ ಇಲ್ಲ. ಇದೀಗ ಶಿವಮೊಗ್ಗದ ಸಕ್ಕರೆಬೈಲಿಗೆ ಈ ಎರಡೂ ಆನೆಗಳನ್ನು ಕರೆದೊಯ್ಯಲಾಗುತ್ತಿದೆ.