Top

ಪ್ರೀತಿಸಲು ಒಪ್ಪದ ಹುಡುಗಿಯ ಹಾಡುಹಗಲೇ ಕೊಚ್ಚಿ ಕೊಲೆ

ಪ್ರೀತಿಸಲು ಒಪ್ಪದ ಹುಡುಗಿಯ ಹಾಡುಹಗಲೇ ಕೊಚ್ಚಿ ಕೊಲೆ
X

ಪ್ರೀತಿಸಲು ಒಪ್ಪದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯನ್ನು ಯುವಕನೊಬ್ಬ ಹಾಡುಹಗಲೇ ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ದೊಡ್ಡಬಳ್ಳಾಪುರದಲ್ಲಿ ಬುಧವಾರ ನಡೆದಿದೆ.

ದೊಡ್ಡಬಳ್ಳಾಪುರದ ರೋಜಿಪುರದ ಉರ್ದುಶಾಲೆಯ ಬಳಿ ಈ ಘಟನೆ ನಡೆದಿದ್ದು, ವಿನಾಯಕ ನಗರದ ಕೀರ್ತನಾ (15) ಹತ್ಯೆಗೊಳಗಾದ ಹುಡುಗಿ.

ಬಿಎಸ್ಎ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಕೀರ್ತನಾ ಅವರನ್ನು ಹಿಂದಿನಿಂದ ಹಿಂಬಾಲಿಸಿದ ಯುವಕ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹುಡುಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಶಾಲೆಗೆ ಹೋಗುತ್ತಿದ್ದ ಕೀರ್ತನಾಳನ್ನು ಹಿಂಬಾಲಿಸಿದ ಯುವಕ ರಸ್ತೆಯಲ್ಲಿ ಮಚ್ಚು ಬೀಸಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ನಗರ ಪೋಲೀಸರು ಹಾಗೂ ವೃತ್ತನಿರೀಕ್ಷಕ ಸಿದ್ಧರಾಜು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Next Story

RELATED STORIES