Top

ನವೆಂಬರ್ 30ಕ್ಕೆ ಒಂದಾಗಲಿದೆ ಕನ್ನಡ ಚಿತ್ರರಂಗ

ನವೆಂಬರ್ 30ಕ್ಕೆ ಒಂದಾಗಲಿದೆ ಕನ್ನಡ ಚಿತ್ರರಂಗ
X

ಇದೇ ನವೆಂಬರ್ 30ಕ್ಕೆ ಕನ್ನಡ ಚಿತ್ರರಂಗ ಒಂದಾಗಲಿದ್ದು, ಅಂಬೇಡ್ಕರ್ ಭವನದಲ್ಲಿ ಅಂಬಿ ಶ್ರದ್ಧಾಂಜಲಿ ಸಭೆ ನಡೆಯಲಿದೆ. ಫಿಲ್ಮ್ ಚೇಂಬರ್‌ನಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡದ ಮೇರುನಟ ಅಂಬರೀಶ್‌ಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಫಿಲ್ಮ್ ಚೇಂಬರ್ ಈ ಕಾರ್ಯಕ್ರಮ ಆರೋಜಿಸಲಿದ್ದು, ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್ ಭಾಗಿಯಾಗಲಿದ್ದಾರೆ.ಅಂದು ಸಿನಿಮಾ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಸ್ಥಗಿತಗೊಳ್ಳಲಿದ್ದು, ಸಿನಿಮಾ ಪ್ರದರ್ಶನ ಎಂದಿನಂತೆ ನಡೆಯಲಿದೆ ಎಂದು ಟಿವಿ5ಗೆ ಫಿಲ್ಮ್ ಚೇಂಬರ್‌ ಕಾರ್ಯದರ್ಶಿ ಭಾ.ಮಾ.ಹರೀಶ್ ಸ್ಪಷ್ಟನೆ ನೀಡಿದ್ದಾರೆ.

ನಟ ಶಿವಣ್ಣ, ಪುನೀತ್, ದರ್ಶನ್, ಸುದೀಪ್, ಯಶ್ ಸೇರಿದಂತೆ ಇಡೀ ಚಿತ್ರರಂಗಕ್ಕೆ ಆಹ್ವಾನ ನೀಡಲಾಗಿದೆ. ಚಲನಚಿತ್ರ ಕಾರ್ಮಿಕರ ಒಕ್ಕೂಟ, ನಿರ್ದೇಶಕರ ಸಂಘ, ಕಲಾವಿದರ ಸಂಘ, ನಿರ್ಮಾಪಕರ ಸಂಘ, ಚಲನಚಿತ್ರ ಅಕಾಡೆಮಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

Next Story

RELATED STORIES