Top

1398 ರೈತರ ಸಾಲ ತೀರಿಸಿದ ಅಮಿತಾಭ್ ಬಚ್ಚನ್​!

1398 ರೈತರ ಸಾಲ ತೀರಿಸಿದ ಅಮಿತಾಭ್ ಬಚ್ಚನ್​!
X

ಬಾಲಿವುಡ್​ ಎಂದರೆ ಅಮಿತಾಭ್​ ಬಚ್ಚನ್​ ಅದ್ಭುತ ನಟ ಮಾತ್ರವಲ್ಲ, ಮಾನವೀಯ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅಮಿತಾಭ್ ಬಚ್ಚನ್ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ಉತ್ತರಪ್ರದೇಶದ 1398 ರೈತರ ಸಾಲವನ್ನು ತೀರಿಸುವ ಮೂಲಕ ಅಮಿತಾಭ್ ಬಚ್ಚನ್ ರೈತರಿಗೆ ನೆರವಾಗಿದ್ದಾರೆ. ಬ್ಯಾಂಕ್ ಆಫ್​ ಇಂಡಿಯಾದಿಂದ ಒನ್​ ಟೈಮ್​ ಸೆಟಲ್​ಮೆಂಟ್​ (ಒಟಿಎಸ್​) ಲೆಟರ್​ ತೆಗೆದುಕೊಳ್ಳಲು ವಾರಾಣಸಿಯಿಂದ ಬರುವವರಿಗೆ ನಾನೇ ಖುದ್ದಾಗಿ ರೈಲ್ವೆ ಟಿಕೆಟ್​ ಬುಕ್​ ಮಾಡಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ಅಮಿತಾಭ್ ಬಚ್ಚನ್ ಹೇಳಿಕೊಂಡಿದ್ದಾರೆ.

ಅಮಿತಾಭ್​ ಬಚ್ಚನ್​ ಕೆಲವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಅದಾದ ನಂತರ ವಾರಣಾಸಿಯ 70 ರೈತರ ಜೊತೆಗೆ ಸಭೆ ನಡೆಸಿದ್ದಾರೆ. ಎಲ್ಲರ ಮನೆಯಲ್ಲೂ ಲಕ್ಷ್ಮಿ ನೆಲೆಸಲಿ. ನನ್ನ ಮಗಳು ಶ್ವೇತಾ ನಮ್ಮ ಮನೆಯ ಲಕ್ಷ್ಮಿ. ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಹಾಗಾಗಿಯೇ, ನನ್ನ ಮಗಳ ಕೈಯಿಂದ ರೈತರಿಗೆ ಒಟಿಎಸ್​ ಪತ್ರಗಳನ್ನು ಕೊಡಿಸಿದ್ದೇನೆ ಎಂದು ಅಮಿತಾಭ್​ ಬರೆದುಕೊಂಡು ತಮ್ಮ ಮತ್ತು ಮಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Next Story

RELATED STORIES