ಸಾವಿಗೂ ಮುನ್ನ ಅಂಬಿ ಮಾಡಿದ್ದರು ಈ ಮಹತ್ವದ ಕೆಲಸ

X
TV5 Kannada28 Nov 2018 8:47 AM GMT
ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಅಂಬಿಗೆ ಮುಂಚೆಯೇ ಸಾವಿನ ಸುಳಿವು ಸಿಕ್ಕಿತ್ತಾ ಎಂಬ ಪ್ರಶ್ನೆ ಮೂಡಿದೆ. ಇಂಥದ್ದೊಂದು ಪ್ರಶ್ನೆ ಮೂಡಲು ಕಾರಣ, ಕೆಲ ತಿಂಗಳ ಹಿಂದೆ ಅಂಬಿ ತಮ್ಮ ಪುತ್ರ ಅಭಿಷೇಕ್ ಹೆಸರಿಗೆ ವಿಲ್ ಮಾಡಿಸಿದ್ದರು.
ಅಂಬರೀಶ್ ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ದೊಡ್ಡ ಅರಸಿನಕೆರೆಯಲ್ಲಿದ್ದ ಏಳೂವರೆ ಎಕರೆ ಜಮೀನನ್ನು ಅಭಿಷೇಕ್ ಹೆಸರಿಗೆ ನೊಂದಾಯಿಸಿದ್ದರು.
ಜುಲೈ 21ರಂದು ಮದ್ದೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಪುತ್ರನ ಹೆಸರಿಗೆ ವಿಲ್ ಮಾಡಿದ್ದ ಅಂಬಿ, ಪುತ್ರ ಅಭಿಷೇಕ್ ಜೊತೆ ಸಬ್ ರಿಜಿಸ್ಟರ್ ಆಫಿಸ್ಗೆ ಆಗಮಿಸಿದ್ದರು. ಸಂಜೆ ವೇಳೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ಕಾನೂನು ಪ್ರಕ್ರಿಯೆ ಮುಗಿಸಿದ್ದರು.
ಇದೆಲ್ಲವನ್ನ ನೋಡಿದಾಗ ಅಂಬಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ಸೂಚನೆ ಸಿಕ್ಕಿತ್ತಾ ಎಂಬ ಪ್ರಶ್ನೆ ಕಾಡಿದೆ.
Next Story