ಸಮಾಧಿಗೆ ಪೂಜೆ, ಕಾವೇರಿ ನದಿಯಲ್ಲಿ ಅಂಬಿ ಅಸ್ಥಿ ವಿಸರ್ಜನೆ

X
TV5 Kannada28 Nov 2018 5:27 AM GMT
ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಅಸ್ಥಿಯನ್ನು ಬುಧವಾರ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಆಗಲಿದೆ. ಈ ಮೂಲಕ ಮಂಡ್ಯದ ಗಂಡು ಕಾವೇರಿ ನದಿಯಲ್ಲಿ ಲೀನರಾಗಲಿದ್ದಾರೆ.
ಕಳೆದ ಶುಕ್ರವಾರ ನಿಧನರಾಗಿದ್ದ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿನ ಡಾ. ರಾಜ್ಕುಮಾರ್ ಸಮಾಧಿ ಪಕ್ಕದಲ್ಲಿ ನೆರವೇರಿಸಲಾಗಿತ್ತು.
ನಿನ್ನೆಯೇ ಅಸ್ಥಿ ವಿಸರ್ಜನೆ ನಡೆಸಬೇಕಿತ್ತು. ಆದರೆ ಮಂಗಳವಾರ ಆಗಿದ್ದರಿಂದ ಬುಧವಾರಕ್ಕೆ ಮುಂದೂಡಲಾಗಿತ್ತು. ಒಕ್ಕಲಿಗ ಸಂಪ್ರದಾಯದಂತೆ ಅಸ್ಥಿ ವಿಸರ್ಜನಾ ಕಾರ್ಯ ನಡೆದಿದ್ದು, ಮಧ್ಯಾಹ್ನ 12ಕ್ಕೆ ಚಿತಾಭಸ್ಮ ವಿಸರ್ಜನೆ ಮಾಡಲಾಗುವುದು.
ಇದಕ್ಕೂ ಮುನ್ನ ಬುಧವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಸಮಾಧಿಯಲ್ಲಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಪೂಜೆ ಸಲ್ಲಿಸಿದರು. ಈ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ದರ್ಶನ್, ಯಶ್ ಮುಂತಾದ ನಟರು ಭಾಗಿಯಾಗಿದ್ದರು.
Next Story