ಕಾವೇರಿ ನದಿಯಲ್ಲಿ ಲೀನವಾದ ಅಂಬಿ

X
TV5 Kannada28 Nov 2018 9:44 AM GMT
ನಟ ಅಂಬರೀಶ್ ಅವರ ಅಸ್ಥಿಯನ್ನು ಪುತ್ರ ಮಂಡ್ಯದ ಶ್ರೀರಂಗಪಟ್ಟಣದಲ್ಲಿನ ಕಾವೇರಿ ಸಂಗಮದಲ್ಲಿ ವಿಸರ್ಜಿಸಿದರು. ಈ ಮೂಲಕ ಭಾವನಾತ್ಮಕ ಸಂಬಂಧ ಹೊಂದಿದ್ದ ಕಾವೇರಿಯ ಮಡಿಲನ್ನು ಮಂಡ್ಯದ ಗಂಡು ಸೇರಿಕೊಂಡರು.
ಬುಧವಾರ ಬೆಳಗ್ಗೆ ಅಂಬರೀಶ್ ಅವರ ಸಮಾಧಿಯಲ್ಲಿ ಅಸ್ಥಿ ಸಂಗ್ರಹಿಸಿದ ನಂತರ ಪೂಜೆ ಸಲ್ಲಿಸಿದ ಕುಟುಂಬ ನೇರವಾಗಿ ಶ್ರೀರಂಗಪಟ್ಟಣಕ್ಕೆ ತೆರಳಿತು. ಕುಟುಂಬದ ಜೊತೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕೆಲವೇ ಆಪ್ತರು ಮಾತ್ರ ತೆರಳಿದರು.
ಶ್ರೀರಂಗಪಟ್ಟಣದ ನದಿ ತಟದಲ್ಲಿ ವಿಧಿವಿಧಾನ ಪೂರೈಸಿದ ನಂತರ ಪುತ್ರ ಅಭಿಷೇಕ್, ಹಿಮ್ಮುಖವಾಗಿ ನಿಂತು ಅಸ್ಥಿಯನ್ನು ವಿಸರ್ಜಿಸಿದರು.
ನಂತರ ಅಭಿಷೇಕ್ ಮೂರು ಬಾರಿ ಕಾವೇರಿ ನದಿಯಲ್ಲಿ ಮುಳುಗು ಹಾಕಿದರು. ಕಣ್ಣೀರು ಹರಿಸುತ್ತಲೇ ಸುಮಲತಾ ತಲೆಯ ಮೇಲೆ ಮೂರು ಬಾರಿ ನೀರು ಚಿಮುಕಿಸಿಕೊಂಡರು.
ಅಸ್ಥಿ ವಿಸರ್ಜನೆ ವೇಳೆ ಪೊಲೀಸರು ಸಾಕಷ್ಟು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೇ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಅಂಬರೀಶ್ ಗೆ ಅಂತಿಮ ವಿದಾಯ ಕೋರಿದರು.
Next Story