Top

ಬೆಂಗಳೂರಿನ ರೇಸ್ ಕೋರ್ಸ್​ ರಸ್ತೆಗೆ ಅಂಬರೀಶ್ ಹೆಸರು?

ಬೆಂಗಳೂರಿನ ರೇಸ್ ಕೋರ್ಸ್​ ರಸ್ತೆಗೆ ಅಂಬರೀಶ್ ಹೆಸರು?
X

ಹಿರಿಯ ನಟ ಅಂಬರೀಶ್ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್​ ರಸ್ತೆಗೆ ಅಂಬರೀಶ್ ರಸ್ತೆ ಎಂದು ಹೆಸರಿಡುವಂತೆ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಭಾಮ ಹರೀಶ್ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

ಭಾಮ ಹರೀಶ್ ಮಂಗಳವಾರ ಟ್ವೀಟ್ ಮಾಡುವ ಮೂಲಕ ಕುಮಾರಸ್ವಾಮಿಗೆ ಕೋರಿಕೆಯನ್ನು ಸಲ್ಲಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಸೇವೆ ಗಣನೀಯವಾಗಿದೆ, ಅವರು ಚಿತ್ರರಂಗದಲ್ಲಿ ಮಾತ್ರವಲ್ಲ ರಾಜಕೀಯ ರಂಗದಲ್ಲಿಯೋ ಸೇವೆಯನ್ನು ಮಾಡಿದ್ದಾರೆ, ಅವರ ಕೊಡುಗೆಯನ್ನು ಪರಿಗಣಿಸಿ ರೇಸ್ ಕೋರ್ಸ್​ ರಸ್ತೆಗೆ ಅಂಬರೀಶ್ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿಯನ್ನು ಮಾಡಿದ್ದಾರೆ.

ಚಿತ್ರರಂಗದಲ್ಲಿ ಇಷ್ಟೇಲ್ಲ ಸಾಧನೆಯನ್ನು ಮಾಡಿದ ಅಂಬರೀಶ್​ಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ವಾಣಿಜ್ಯ ಮಂಡಳಿ ಕಾರ್ಯದರ್ಶಿಯಾದ ಭಾಮ ಹರೀಶ್ ತಮ್ಮ ಕೋರಿಕೆಯನ್ನು ಟ್ವೀಟ್ ಮಾಟಿದ್ದಾರೆ.

Next Story

RELATED STORIES