Top

ಇನ್ಮೇಲೆ ಹೋಮ್‌ವರ್ಕ್ ಮಾಡಂಗಿಲ್ಲ..!

ಇನ್ಮೇಲೆ ಹೋಮ್‌ವರ್ಕ್ ಮಾಡಂಗಿಲ್ಲ..!
X

ನವದೆಹಲಿ: ಶಿಕ್ಷಣ ಸಚಿವಾಲಯವೂ ಹೊಸ ನಿರ್ದೇಶನವನ್ನು ಹೊರಡಿಸಿದ್ದು, ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್ ಕೊಡುವಂತಿಲ್ಲವೆಂದು ಹೇಳಿದೆ. ಚಿಕ್ಕ ಮಕ್ಕಳಿಗೆ ಹೆಚ್ಚಿನ ಭಾರ(ಪಠ್ಯ-ಪುಸ್ತಕ) ಹೊರಲು ಸಾಧ್ಯವಾಗದ ಕಾರಣ, ಈ ನಿರ್ದೇಶನ ಜಾರಿಗೆ ತರಲಾಗಿದೆ.

ಹೆಚ್ಚುವರಿ ಪುಸ್ತಕಗಳನ್ನು ತರಲು ವಿದ್ಯಾರ್ಥಿಗಳಿಗೆ ಸೂಚಿಸಬಾರದು, ನಿರ್ದಿಷ್ಟ ಮಿತಿಯನ್ನು ಮೀರಬಾರದೆಂದು ಆದೇಶಿಸಿದ್ದು, ಇದರಿಂದ 1 ಮತ್ತು 2ನೇ ತರಗತಿ ಮಕ್ಕಳಿಗೆ ಹೋಮ್‌ವರ್ಕ್‌ನಿಂದ ರಿಲೀಫ್ ಸಿಕ್ಕಿದೆ.

1 ಮತ್ತು 2 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಚೀಲಗಳ ತೂಕವು 1.5 ಕೆಜಿ ಮೀರಬಾರದು, ಆದರೆ ವರ್ಗ 3 ರಿಂದ 5 ರವರೆಗಿನ ವಿದ್ಯಾರ್ಥಿಗಳ ಶಾಲಾ ಚೀಲವು 2 ಕೆ.ಜಿ ರಿಂದ 3 ಕೆ.ಜಿ.ವರೆಗಿನ ತೂಕವಿರಬೇಕೆಂದು ಸೂಚಿಸಿದೆ.

6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳ ಶಾಲಾ ಚೀಲವು 4 ಕೆಜಿಗಳಿಗಿಂತ ಹೆಚ್ಚು ಇರಬಾರದು, 8 ಮತ್ತು 9ನೇ ತರಗತಿಯ ಶಾಲಾ ಚೀಲಗಳ ತೂಕವು 4.5 ಕೆ.ಜಿಗಿಂತ ಹೆಚ್ಚಿರಬಾರದು.10ನೇ ತರಗತಿ ವಿದ್ಯಾರ್ಥಿಯ ಶಾಲಾ ಚೀಲ 5 ಕೆ.ಜಿ ಗಿಂತಲೂ ಹೆಚ್ಚು ತೂಕವಿರಬಾರದು ಎಂದು ನಿರ್ದೇಶನದಲ್ಲಿ ಸೂಚಿಸಲಾಗಿದೆ.

Next Story

RELATED STORIES