Top

ಡಿಕೆಶಿ ಕಾಪಾಡುತ್ತಿದ್ದಾರೆಯೇ ನಾಥಪಂಥ ಸ್ವಾಮೀಜಿ?

ಡಿಕೆಶಿ ಕಾಪಾಡುತ್ತಿದ್ದಾರೆಯೇ ನಾಥಪಂಥ ಸ್ವಾಮೀಜಿ?
X

ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಪರಿಸ್ಥಿತಿ ಎದುರಾದಾಗಲೆಲ್ಲ ಆಪಧ್ಬಾಂದವನಾಗಿ ನಿಂತವರು ಜಲಸಂಪನ್ಮೂಲ ಸಚಿವ ಡಿಕೆಶಿ. ಬಿಜೆಪಿ ನಾಯಕರ ಆಫರೇಷನ್ ಕಮಲವನ್ಮ ಠುಸ್ ಮಾಡಿ ಸರ್ಕಾರ ಸೇಫ್ ಮಾಡಿದವರು ಇದೇ ಡಿಕೆಶಿ.

ಬೈ ಎಲೆಕ್ಷನ್ ನಲ್ಲೂ ಬಿಎಸ್ವೈ ರಾಮುಲುಗೆ ತೊಡೆ ತಟ್ಟಿ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬಂದವರು ಇದೇ ಜಲಸಂಪನ್ಮೂಲ ಸಚಿವರು..ಪದೇ ಪದೇ ತಮಗೆ ಇದೇ ಟ್ರಬಲ್ ಶೂಟರ್ ಡಿಕೆಶಿ ವಿಘ್ನ ತಂದೊಡ್ಡಿದ್ದಾರೆಂದು ಭಾವಿಸಿ ಐಟಿ,ಇಡಿ ಮೂಲಕ ಹಣಿಯೋಕೆ ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದರು.

ಹೈಕಮಾಂಡ್ ಮೇಲೆ ಒತ್ತಡ ತಂದು ಇಡಿ ಕುಣಿಕೆಗೆ ಸಿಲುಕಿಸುವ ಪ್ರಯತ್ನವನ್ನೂ ನಡೆಸಿದ್ರು. ಆದರೆ ಡಿಕೆಶಿ ಐಟಿ ಅಲ್ಲ ಇಡಿ ಇರಿತದಿಂದಲೂ ತಪ್ಪಿಸಿಕೊಂಡಿದ್ದಾರೆ. ಡಿಕೆಶಿ ಇಡಿಯಿಂದಲೂ ಪಾರಾಗಿದ್ದ ತಮ್ಮದೇ ಬಿಜೆಪಿ ಹೈಕಮಾಂಡ್ ನಿಂದ ಅನ್ನೋದು ರಾಜ್ಯ ಬಿಜೆಪಿ ನಾಯಕರ ಗಮನಕ್ಕೆ ಬಂದಂತಿಲ್ಲ ಯಾಕಂದ್ರೆ ಅಷ್ಟು ನಾಜೂಕಾಗಿ ಇಡೀ ಮಾತುಕತೆಯನ್ನ ನಾಥಪಂಥದ ಸ್ವಾಮೀಜಿಗಳು ಮಾಡಿ ಮುಗಿಸಿದ್ದಾರೆ.

ಇಂತದ್ದೊಂದು ಪ್ರಶ್ನೆ ಉದ್ಬವಿಸೋದು ಸಹಜ. ಯಾಕಂದ್ರೆ ಆ ನಾಥಪಂಥದ ಶ್ರೀಗಳು ಬೇರೆ ಯಾರು ಅಲ್ಲ. ನಮ್ಮದೇ ರಾಜ್ಯದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು. ತಮ್ಮದೇ ಸಮುದಾಯದ ಪ್ರಬಲನಾಯಕ ಹಾಗೂ ತಮ್ಮದೇ ಸಮುದಾಯದ ಅಧಿಕಾರದಲ್ಲಿರುವ ಸರ್ಕಾರವನ್ನ ರಕ್ಷಿಸಲೇ ಬೇಕಾದ ಅನಿವಾರ್ಯತೆಯಿಂದ ಸಚಿವ ಡಿಕೆಶಿ ಬೆನ್ನಿಗೆ ನಿಂತಿದ್ದಾರೆ.

ಹೀಗಾಗಿಯೇ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥರ ಜೊತೆ ದೆಹಲಿಯಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ..ಲೋಕಸಭಾ ಚುನಾವಣೆಯವರೆಗೆ ಯಾವುದೇ ಕಾರಣಕ್ಕೂ ಡಿಕೆಶಿಯನ್ನ ಮುಟ್ಟಬಾರದು,ಒಂದು ವೇಳೆ ಮುಟ್ಟಿದರೆ ಇಡೀ ಸಮುದಾಯವೇ ಬಿಜೆಪಿ ವಿರುದ್ಧ ತಿರುಗಿ ನಿಲ್ಲಲಿದೆ.

ಹೀಗಾಗಿ ನಿಮ್ಮ‌ಹೈಕಮಾಂಡ್ ಮನವೊಲಿಸಿ ಇಡಿ ತನಿಖೆಯನ್ನ ಸದ್ಯಕ್ಕೆ ನಿಲ್ಲಿಸಬೇಕು ಅಂತ ಮನವಿ ಸಲ್ಲಿಸಿದ್ದಾರೆ..ತಮ್ಮದೇ ನಾಥಸಂಪ್ರದಾಯದ ಶ್ರೀಗಳ ಬೇಡಿಕೆಯನ್ನ ಯೋಗಿ ಆದಿತ್ಯನಾಥರು ಕೂಡ ಒಪ್ಪಿಕೊಂಡರಂತೆ..ಇದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದೆ ಪ್ರಸ್ತಾಪಿಸಿ ಇಡಿ ತನಿಖೆಗೆ ಬ್ರೇಕ್ ಹಾಕಿದ್ದಾರೆನ್ನುವುದು ಮೂಲಗಳ ಮಾಹಿತಿ.

ಒಟ್ನಲ್ಲಿ ತಮ್ಮದೇ ಸಮುದಾಯದ ಹಿಡಿತದಲ್ಲಿರುವ ಸರ್ಕಾರ ಹಾಗೂ ತಮ್ಮದೆ ಸಮುದಾಯದ ಪ್ರಭಾವಿ ನಾಯಕನನ್ನ ರಕ್ಷಿಸಲು ಸ್ವತಃ ಶ್ರೀಗಳೇ ಕಂಕಣತೊಟ್ಟಿದ್ದಾರೆ..ಹೀಗಾಗಿಯೇ ಮೇಲಿಂದ ಮೇಲೆ ಡಿಕೆಶಿಗೆ ಐಟಿ,ಇಡಿ ನೊಟೀಸ್ ಜಾರಿಯಾದ್ರೂ ಡಿಕೆಶಿಯನ್ನ ಟಚ್ ಮಾಡೋಕೆ ಸಾಧ್ಯವಾಗ್ತಿಲ್ಲ. ಯೋಗಿ ಆದಿತ್ಯನಾಥರ ಮೂಲಕ ಬಿಜೆಪಿ ಹೈಕಮಾಂಡ್ ಮೇಲೆಯೇ ಒತ್ತಡ ತಂದ ನಿರ್ಮಲಾನಂದ ಶ್ರೀಗಳು ಡಿಕೆಶಿಯನ್ನ ರಕ್ಷಿಸಿದ್ದಾರೆ.

ಶಿವಕುಮಾರ್ ಜೋಹಳ್ಳಿ,ಪೊಲಿಟಿಕಲ್ ಬ್ಯೂರೋ,ಟಿವಿ೫,ಬೆಂಗಳೂರು

Next Story

RELATED STORIES